ADVERTISEMENT

ಆನಂದಿಬೆನ್‌ ಪ್ರಮಾಣ

​ಪ್ರಜಾವಾಣಿ ವಾರ್ತೆ
Published 22 ಮೇ 2014, 19:30 IST
Last Updated 22 ಮೇ 2014, 19:30 IST

ಗಾಂಧಿನಗರ (ಪಿಟಿಐ): ನಿಯೋಜಿತ ಪ್ರಧಾನಿ ನರೇಂದ್ರ ಮೋದಿ ಅವರ ನಿಕಟವರ್ತಿ ಆನಂದಿಬೆನ್‌ ಪಟೇಲ್‌ ಅವರು ಗುಜರಾತ್‌ನ ಮೊದಲ ಮಹಿಳಾ ಮುಖ್ಯ­ಮಂತ್ರಿಯಾಗಿ ಗುರುವಾರ ಅಧಿಕಾರ ಸ್ವೀಕರಿಸಿದರು.

‘ಕೆಲವೇ ಪಕ್ಷಗಳು ಮಹಿಳೆಯರಿಗೆ ನಾಯಕತ್ವ ನೀಡುತ್ತವೆ. ಬಿಜೆಪಿಯು ಗುಜರಾತ್‌ಗೆ ಮಹಿಳಾ ಮುಖ್ಯ­ಮಂತ್ರಿ­ಯನ್ನು ನೀಡಿದೆ. ಹಾಗಾಗಿ ನಾನಷ್ಟೇ ಅಲ್ಲ, ಗುಜರಾತ್‌ನ ಪ್ರತಿ ಮಹಿಳೆಯೂ  ತಾನೇ ಮುಖ್ಯಮಂತ್ರಿ­ಯಾದಂತೆ ಸಂಭ್ರಮಿಸುತ್ತಿದ್ದಾಳೆ’ ಎಂದು ಆನಂದಿಬೆನ್‌ ಹೇಳಿದರು.

ಸಮಾರಂಭದಲ್ಲಿ ಮೋದಿ, ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌, ಹಿರಿಯ ನಾಯಕರಾದ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ್‌ ಜೋಷಿ, ಸುಷ್ಮಾ ಸ್ವರಾಜ್‌,  ವೆಂಕಯ್ಯ ನಾಯ್ಡು, ನಿತಿನ್‌ ಗಡ್ಕರಿ ಹಾಗೂ ಸುಬ್ರಮಣಿಯನ್‌ ಸ್ವಾಮಿ ಉಪಸ್ಥಿತರಿದ್ದರು.
ಮುಖ್ಯಮಂತ್ರಿಗಳಾದ ಪ್ರಕಾಶ್‌ ಸಿಂಗ್‌ ಬಾದಲ್‌ (ಪಂಜಾಬ್‌), ಶಿವರಾಜ್‌ ಸಿಂಗ್‌ ಚೌಹಾಣ್‌ (ಮಧ್ಯಪ್ರದೇಶ), ವಸುಂಧರಾ ರಾಜೆ (ರಾಜಸ್ತಾನ) ಹಾಗೂ ರಮಣ್‌ ಸಿಂಗ್‌ (ಛತ್ತೀಸಗಡ) ಕೂಡ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.