ADVERTISEMENT

ಇಂದಿನಿಂದ ಮೋದಿ ಪ್ರವಾಸ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2014, 19:30 IST
Last Updated 24 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರ ಐದು ದಿನಗಳ ಅಮೆರಿಕ ಪ್ರವಾಸ ಗುರುವಾರದಿಂದ ಶುರುವಾಗಲಿದೆ.
ಸೆಪ್ಟೆಂಬರ್‌್ ೨೭ರಂದು ವಿಶ್ವಸಂಸ್ಥೆ ಮಹಾಧಿವೇಶನವನ್ನು ಉದ್ದೇಶಿಸಿ ಮಾತ­ನಾಡಲಿದ್ದಾರೆ.  ಅಲ್ಲದೇ ಅಧ್ಯಕ್ಷ ಬರಾಕ್‌ ಒಬಾಮ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.  

ಅಧಿಕಾರಿಗಳು, ಉದ್ಯ­ಮಿ­ಗಳು ಹಾಗೂ ಸಾರ್ವಜನಿಕರೊಂದಿಗೆ ಮೋದಿ ಬಿಡುವಿಲ್ಲದ ಚರ್ಚೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಶ್ರೀಲಂಕಾ ಅಧ್ಯಕ್ಷ ಮಹಿಂದ ರಾಜಪಕ್ಸೆ, ನೇಪಾಳ  ಪ್ರಧಾನಿ ಸುಶೀಲ್‌  ಕೊಯಿರಾಲ ಹಾಗೂ ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಅವರೊಂದಿಗೆ  ಮೋದಿ ದ್ವಿಪಕ್ಷೀಯ ಸಮಾಲೋಚನೆ ನಡೆಸುವರು. ಆದರೆ, ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಅವರನ್ನು ಭೇಟಿಯಾಗುವ ಕಾರ್ಯಕ್ರಮ ಇಲ್ಲ.

ಭಾರತದಲ್ಲಿ ಹೂಡಿಕೆಗೆ ಆಹ್ವಾನ ನೀಡುವ ಉದ್ದೇಶದಿಂದ ಮೋದಿ, ಗೂಗಲ್‌, ಬೋಯಿಂಗ್‌ ಆಂಡ್‌ ಜನರಲ್‌ ಎಲೆಕ್ಟ್ರಿಕ್ಸ್‌ ಸೇರಿದಂತೆ ಅಮೆರಿಕದ ೧೫ಕ್ಕೂ ಹೆಚ್ಚು ಪ್ರಮುಖ ಕಾರ್ಪೋರೆಟ್‌್ ದಿಗ್ಗಜರನ್ನು ಭೇಟಿಯಾಗುವರು.

ಕಾರ್ಯಕ್ರಮಕ್ಕೆ 30 ಸಾವಿರ  ಜನರು
ನ್ಯೂಯಾರ್ಕ್ (ಪಿಟಿಐ): ನ್ಯೂಯಾ­ರ್ಕ್‌ಗೆ ಭೇಟಿ ನೀಡಲಿರುವ  ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯ­ಕ್ರಮಕ್ಕೆ 5ರಿಂದ 90ವರ್ಷ ವಯೋ­ಮಾನದ ಸುಮಾರು 30 ಸಾವಿರ ಜನರು ಸೇರುವ ನಿರೀಕ್ಷೆ ಇದೆ ಎನ್ನಲಾಗಿದೆ. ಸೆ.28ರಂದು ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಭಾರತೀಯ ಸಮುದಾಯದ ಪುರಸ್ಕಾರ ಕಾರ್ಯ­­ಕ್ರಮದಲ್ಲಿ ಮೋದಿ ಭಾಗ­ವಹಿಸಲಿ­ದ್ದಾರೆ.

ಈ ಕಾರ್ಯ­ಕ್ರಮ­ದಲ್ಲಿ ಪಾಲ್ಗೊ­ಳ್ಳು­ವವರ ಹೆಸರು ನೋಂದ­ಣಿ­­ಯಾಗಿದ್ದು, ಯುವ ಜನರೇ ಹೆಚ್ಚಿನ ಸಂಖ್ಯೆ­ಯಲ್ಲಿದ್ದಾರೆ ಎಂದು ಈ ಕಾರ್ಯಕ್ರಮ ಸಂಯೋಜಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.