ADVERTISEMENT

ಉತ್ತರಾಖಂಡ, ಗೋವಾದಲ್ಲಿ ಬಿಜೆಪಿಗೆ ಗೆಲುವು, ಪಂಜಾಬ್‌ನಲ್ಲಿ ಕಾಂಗ್ರೆಸ್, ಉತ್ತರಪ್ರದೇಶ, ಮಣಿಪುರದಲ್ಲಿ ಬಿಜೆಪಿ ಉತ್ತಮ ಸಾಧನೆ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 9:46 IST
Last Updated 9 ಮಾರ್ಚ್ 2017, 9:46 IST
ಚಿತ್ರ ಕೃಪೆ: ಇಂಡಿಯಾ ಟೈಮ್ಸ್‌–ಟೈಮ್ಸ್‌ ಆಪ್‌ ಇಂಡಿಯಾ
ಚಿತ್ರ ಕೃಪೆ: ಇಂಡಿಯಾ ಟೈಮ್ಸ್‌–ಟೈಮ್ಸ್‌ ಆಪ್‌ ಇಂಡಿಯಾ   

ನವದೆಹಲಿ: ಬಾರೀ ನಿರೀಕ್ಷೆ  ಹುಟ್ಟಹಾಕಿರುವ ಐದು  ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ  ಮತದಾನೋತ್ತರ ಸಮೀಕ್ಷೆಗಳ ವಿಶ್ಲೇಷಣೆ ಪ್ರಕಾರ ನಾಲ್ಕು  ರಾಜ್ಯಗಳಲ್ಲಿ  ಬಿಜೆಪಿ ಉತ್ತಮ ಸಾಧನೆ ಮಾಡಲಿದೆ.

ಪ್ರಜಾವಾಣಿ ಆನ್‌ಲೈನ್‌ ತಂಡ ನ್ಯೂಸ್‌ ವೆಬ್‌ಸೈಟ್‌ಗಳಲ್ಲಿ ಬಿತ್ತರಗೊಂಡ ವಿವಿಧ ಚುನಾವಣಾ ಪೂರ್ವ ಮತ್ತು ಮತದಾನೋತ್ತರ ಸಮೀಕ್ಷೆಗಳನ್ನು ವಿಶ್ಲೇಷಣೆ ಮಾಡಿದೆ.

ಉತ್ತಾರಖಂಡ, ಗೋವಾ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತ ಎನ್ನಲಾಗಿದೆ. ಉತ್ತರಪ್ರದೇಶ ರಾಜ್ಯದಲ್ಲಿ   ಬಿಜೆಪಿ ಅಧಿಕಾರದ ಸನಿಹಕ್ಕೆ ಬರಲಿದೆ. ಈಶಾನ್ಯ ಭಾಗದ ಮಣಿಪುರದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ . ಆದರೆ ಪಂಜಾಬ್‌ನಲ್ಲಿ ಬಿಜೆಪಿಗೆ ಹೀನಾಯ ಸೋಲಾಗಲಿದ್ದು ಕಾಂಗ್ರೆಸ್ ಅಧಿಕಾರ ಹಿಡಿಯುವ ಲಕ್ಷಣಗಳಿವೆ ಎಂದು ಸಮೀಕ್ಷೆಗಳು ತಿಳಿಸಿವೆ.

ADVERTISEMENT

ಎಬಿಪಿ, ಲೋಕನೀತಿ,  ಸಿಎಸ್‌ಡಿಎಸ್‌, ಆ್ಯಕ್ಷಿಸ್‌ ಮೈ ಇಂಡಿಯಾ, ನ್ಯೂಸ್‌ 18, ಇಂಡಿಯಾ ಟುಡೆ  ಸಂಸ್ಥೆಗಳು ಚುನಾವಣೆ ಪೂರ್ವ ಮತ್ತು ಮತದಾನೋತ್ತರ ಸಮೀಕ್ಷೆ ನಡೆಸಿದ್ದವು.
ಉತ್ತರ ಪ್ರದೇಶ

ಪಕ್ಷ ಸಿಎಸ್‌ಡಿಎಸ್‌ ಸಮೀಕ್ಷೆ ಆ್ಯಕ್ಷಿಸ್‌ ಮೈ ಇಂಡಿಯಾ ಸಮೀಕ್ಷೆ ನ್ಯೂಸ್‌ 18 ಸಮೀಕ್ಷೆ ಇಂಡಿಯಾ ಟುಡೆ ಸಮೀಕ್ಷೆ
ಎಸ್‌ಪಿ 192 173  181 130
ಬಿಜೆಪಿ 123 185  198 170
ಬಿಎಸ್‌ಪಿ 80 95 80 90
ಕಾಂಗ್ರೆಸ್ 19 18 15 12
ಇತರೆ 00 6 12 00

ಕುತೂಹಲ  ಕೆರಳಿಸಿರುವ ಉತ್ತರಪ್ರದೇಶದಲ್ಲಿ ಬಿಜೆಪಿ ಅಧಿಕಾರದ ಸನಿಹಕ್ಕೆ ಬರಲಿದೆ ಎಂದು ಎಬಿಪಿ, ಲೋಕನೀತಿ,  ಸಿಎಸ್‌ಡಿಎಸ್‌, ಆ್ಯಕ್ಷಿಸ್‌ ಮೈ ಇಂಡಿಯಾ ಸಂಸ್ಥೆಗಳು ತಿಳಿಸಿವೆ. ಆದರೆ  ನ್ಯೂಸ್‌ 18, ಇಂಡಿಯಾ ಟುಡೆ  ಸಂಸ್ಥೆಗಳು ಬಿಜೆಪಿ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ಹೇಳಿವೆ. ಎಬಿಪಿ, ಲೋಕನೀತಿ,  ಸಿಎಸ್‌ಡಿಎಸ್‌, ಆ್ಯಕ್ಷಿಸ್‌ ಮೈ ಇಂಡಿಯಾ ಸಮೀಕ್ಷೆಗಳ ಪ್ರಕಾರ ಉತ್ತರ ಪ್ರದೇಶದಲ್ಲಿ ಮತ್ತೆ ಸಮಾಜವಾದಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಉತ್ತರಪ್ರದೇಶ ರಾಜ್ಯದಲ್ಲಿ  404  ವಿಧಾನಸಭಾ ಸ್ಥಾನಗಳಿವೆ. ಇವುಗಳಲ್ಲಿ 203 ಸ್ಥಾನಗಳನ್ನು ಪಡೆದ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ

ಉತ್ತರಾಖಂಡ

ಪಕ್ಷ ಸಿಎಸ್‌ಡಿಎಸ್‌ ಸಮೀಕ್ಷೆ ಆ್ಯಕ್ಷಿಸ್‌ ಮೈ ಇಂಡಿಯಾ ಸಮೀಕ್ಷೆ ನ್ಯೂಸ್‌ 18 ಸಮೀಕ್ಷೆ
ಬಿಜೆಪಿ 36 42 40
ಕಾಂಗ್ರೆಸ್ 25 28 26
ಇತರೆ 09 00 04

ಉತ್ತರಾಖಂಡ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ.  ಸಿಎಸ್‌ಡಿಎಸ್‌, ಆ್ಯಕ್ಷಿಸ್‌ ಮೈ ಇಂಡಿಯಾ, ನ್ಯೂಸ್‌ 18 ಸಮೀಕ್ಷೆಯ ಪ್ರಕಾರ ಬಿಜೆಪಿ ನಿಚ್ಚಳ ಬಹುಮತ ಪಡೆಯಲಿದೆ.  ಬಿಜೆಪಿ 40 ರಿಂದ 42 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರಸ್‌ 25 ರಿಂದ 26 ಸ್ಥಾನಗಳನ್ನು ಗೆಲ್ಲಲಿದೆ. ಉತ್ತರಾಖಂಡದಲ್ಲಿ 70 ವಿಧಾನಸಭಾ ಸ್ಥಾನಗಳಿವೆ. ಇವುಗಳಲ್ಲಿ 36 ಸ್ಥಾನಗಳನ್ನು ಪಡೆದ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ.

ಗೋವಾ

ಪಕ್ಷ ಸಿಎಸ್‌ಡಿಎಸ್‌ ಸಮೀಕ್ಷೆ ಆ್ಯಕ್ಷಿಸ್‌ ಮೈ ಇಂಡಿಯಾ ಸಮೀಕ್ಷೆ ನ್ಯೂಸ್‌ 18 ಸಮೀಕ್ಷೆ
ಬಿಜೆಪಿ 25 24 26
ಕಾಂಗ್ರೆಸ್ 12 14 16
ಎಎಪಿ 03 04 02

ಸಣ್ಣ ರಾಜ್ಯ ಗೋವಾದಲ್ಲೂ ಸಹ ಆಡಳಿತರೂಢ ಬಿಜೆಪಿ ಮತ್ತೆ ಅಧಿಕಾರ ಉಳಿಸಕೊಳ್ಳಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.  ಬಿಜೆಪಿ 25 ಸ್ಥಾನಗಳನ್ನು ಗೆದ್ದರೆ ಕಾಂಗ್ರೆಸ್ 16 ಸ್ಥಾನಗಳನ್ನು ಗೆಲ್ಲಲಿದ್ದು , ಎಎಪಿ 3 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಗಳು ಹೇಳಿವೆ.
ಗೋವಾ ರಾಜ್ಯದಲ್ಲಿ 40 ವಿಧಾನಸಭಾ ಸ್ಥಾನಗಳಿವೆ. ಇವುಗಳಲ್ಲಿ 21 ಸ್ಥಾನಗಳನ್ನು ಪಡೆದ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ

ಮಣಿಪುರ

ಪಕ್ಷ ಸಿಎಸ್‌ಡಿಎಸ್‌ ಸಮೀಕ್ಷೆ ಆ್ಯಕ್ಷಿಸ್‌ ಮೈ ಇಂಡಿಯಾ ಸಮೀಕ್ಷೆ ನ್ಯೂಸ್‌ 18 ಸಮೀಕ್ಷೆ
ಬಿಜೆಪಿ 23 22 23
ಕಾಂಗ್ರೆಸ್ 19 17 16
ಇತರೆ 18 20 21

ಈಶಾನ್ಯ ಭಾರತದ ಚಿಕ್ಕ ರಾಜ್ಯ ಮಣಿಪುರದಲ್ಲಿ ಈ ಸಲ ಕೇಸರಿ ಭಾವುಟ ಹಾರಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ. ಬಿಜೆಪಿ 25 ಸ್ಥಾನಗಳನ್ನು ಗೆದ್ದರೆ, ಕಾಂಗ್ರಸ್‌ 19 ಸ್ಥಾನಗಳನ್ನು ಪಡೆಯಲಿದ್ದು ಟಿಎಂಸಿ ಮತ್ತು ಇತರರು 18 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ಮಣಿಪುರ ರಾಜ್ಯದಲ್ಲಿ 60 ವಿಧಾನಸಭಾ ಸ್ಥಾನಗಳಿವೆ. ಇವುಗಳಲ್ಲಿ 31 ಸ್ಥಾನಗಳನ್ನು ಪಡೆದ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ

ಪಂಜಾಬ್‌

ಪಕ್ಷ ಸಿಎಸ್‌ಡಿಎಸ್‌ ಸಮೀಕ್ಷೆ ಆ್ಯಕ್ಷಿಸ್‌ ಮೈ ಇಂಡಿಯಾ ಸಮೀಕ್ಷೆ ನ್ಯೂಸ್‌ 18 ಸಮೀಕ್ಷೆ
ಬಿಜೆಪಿ-ಅಕಾಲಿದಳ 16 20 18
ಕಾಂಗ್ರೆಸ್ 58 59 62
ಎಎಪಿ 35 40 38

ಪಂಜಾಬ್‌ ರಾಜ್ಯದಲ್ಲಿ ಬಿಜೆಪಿ ಮತ್ತು ಅಕಾಲಿ ದಳ ಮೈತ್ರಿಕೂಟಕ್ಕೆ ಬಾರೀ ಹಿನ್ನೆಡೆಯಾಗಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.
ಕಾಂಗ್ರೆಸ್‌ ಪಕ್ಷ ಪಂಜಾಬ್‌ ರಾಜ್ಯದಲ್ಲಿ  ಉತ್ತಮ ಸಾಧನೆ ಮಾಡಲಿದೆ. ಸಮೀಕ್ಷೆಗಳ ಪ್ರಕಾರ ಬಿಜೆಪಿ ಕೇವಲ 15 ರಿಂದ 20 ಸ್ಥಾನಗಳನ್ನು ಪಡೆಯಲಿದೆ ಎನ್ನಲಾಗಿದೆ.

ಸಿಎಸ್‌ಡಿಎಸ್‌, ಆ್ಯಕ್ಷಿಸ್‌ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ ಕಾಂಗ್ರಸ್‌  58 ರಿಂದ 65 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ. ಎಎಪಿ ಉತ್ತಮ ಸಾಧನೆ ಮಾಡಲಿದ್ದು 35 ರಿಂದ 40 ಸ್ಥಾನಗಳನ್ನು ಪಡೆಯಲಿದೆ ಎಂದು ಸಮೀಕ್ಷೆಗಳು  ಹೇಳಿವೆ .ಪಂಜಾಬ್‌ ರಾಜ್ಯದಲ್ಲಿ 117 ವಿಧಾನಸಭಾ ಸ್ಥಾನಗಳಿವೆ. ಇವುಗಳಲ್ಲಿ 59 ಸ್ಥಾನಗಳನ್ನು ಪಡೆದ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ

ಒಟ್ಟಾರೆ ಸಮೀಕ್ಷೆಗಳ ಪ್ರಕಾರ ಉತ್ತರಪ್ರದೇಶ, ಪಂಜಾಬ್‌ ಮತ್ತು  ಮಣಿಪುರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗುವ  ಸಾಧ್ಯತೆಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.