ADVERTISEMENT

ಉಪಗ್ರಹ ಉಡಾವಣೆ ಯಶಸ್ವಿ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2016, 19:45 IST
Last Updated 10 ಮಾರ್ಚ್ 2016, 19:45 IST

ಶ್ರೀಹರಿಕೋಟಾ, ಆಂಧ್ರಪ್ರದೇಶ (ಪಿಟಿಐ):  ಇಸ್ರೋದ ಆರನೇ ಪಥದರ್ಶಕ ಉಪಗ್ರಹ ಐಆರ್ಎನ್‌ಎಸ್ಎಸ್‌–1ಎಫ್ ಅನ್ನು ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಬುಧವಾರ ಸಂಜೆ 4.01 ಗಂಟೆಗೆ ಸರಿಯಾಗಿ ಪಥದರ್ಶಕ ಉಪಗ್ರಹವನ್ನು ಹೊತ್ತು ಸಾಗಿದ ಧ್ರುವೀಯ ಉಪಗ್ರಹ ಉಡಾವಣಾ ವಾಹನ ಸಿ32 (ಪಿಎಸ್‌ಎಲ್‌ವಿ) ಯಶಸ್ವಿಯಾಗಿ ಕಕ್ಷೆಗೆ ಸೇರಿಸಿತು. 

‘ಭಾರತವು ಸ್ವಂತಬಲದ ಪಥದರ್ಶಕ (ಅಮೆರಿಕದ ಜಿಪಿಎಸ್ ವ್ಯವಸ್ಥೆ ರೀತಿಯದ್ದು ) ವ್ಯವಸ್ಥೆಯನ್ನು ಹೊಂದುವ ಸಮಯ ಹತ್ತಿರ ಬಂದಿದೆ. ಐಆರ್ಎನ್‌ಎಸ್ಎಸ್‌ ಸರಣಿಯ ಕೊನೆಯ ಹಾಗೂ ಏಳನೇ ಉಪಗ್ರಹವನ್ನು ಮುಂದಿನ ತಿಂಗಳು ಉಡಾವಣೆ ಮಾಡಲಾಗುವುದು’ ಎಂದು ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ.

ಪಥದರ್ಶಕ ವ್ಯವಸ್ಥೆಗೆ ನಾಲ್ಕು ಉಪಗ್ರಹಗಳು ಮಾತ್ರ ಸಾಕು. ಆದರೆ ದಕ್ಷ ಮತ್ತು ಕರಾರುವಕ್ಕಾದ ಮಾಹಿತಿ ನೀಡಲು ಏಳು ಉಪಗ್ರಹಗಳನ್ನು ಕಕ್ಷೆಗೆ ಕಳುಹಿಸಲಾಗುತ್ತಿದೆ. ಯೋಜನೆ ಕಾರ್ಯಾರಂಭವಾದ ಬಳಿ 24 ಗಂಟೆ ಸೇವೆ ಸಿಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.