ADVERTISEMENT

ಎಲ್‌ಪಿಜಿ ತಿಂಗಳಿಗೆ ₨ 5 ಹೆಚ್ಚಳ?

​ಪ್ರಜಾವಾಣಿ ವಾರ್ತೆ
Published 24 ಜೂನ್ 2014, 19:30 IST
Last Updated 24 ಜೂನ್ 2014, 19:30 IST

ನವದೆಹಲಿ (ಪಿಟಿಐ): ಅಡುಗೆ ಅನಿಲ ಸಿಲಿಂಡರ್‌ ಬೆಲೆಯನ್ನು ಪ್ರತಿ ತಿಂಗಳು ₨ 5 ಹಾಗೂ ಸೀಮೆಎಣ್ಣೆ ದರವನ್ನು ತಿಂಗಳಿ­ಗೊಮ್ಮೆ  ಲೀಟರ್‌ಗೆ 50 ಪೈಸೆಯಿಂದ ಒಂದು ರೂಪಾಯಿವರೆಗೆ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಈ ಎರಡು ಇಂಧನಗಳಿಗೆ ನೀಡುತ್ತಿ­ರುವ ವಾರ್ಷಿಕ ₨ 80,000 ಕೋಟಿ ಸಬ್ಸಿಡಿ ಹೊರೆಯನ್ನು ಇಳಿಸಿಕೊಳ್ಳು­ವುದು ಸರ್ಕಾರದ ಉದ್ದೇಶವಾಗಿದೆ.

ಈ ಹಿಂದಿನ ಯುಪಿಎ ಸರ್ಕಾರ 2013ರ ಫೆಬ್ರುವರಿಯಲ್ಲಿ ಡೀಸೆಲ್‌ ಬೆಲೆ­ಯನ್ನು ಪ್ರತಿ ತಿಂಗಳು ಲೀಟರ್‌ಗೆ 50 ಪೈಸೆ ಹೆಚ್ಚಿಸಲು ನಿರ್ಧರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.