ADVERTISEMENT

ಒಆರ್‌ಒಪಿ ಯೋಜನೆ ಇಂದು ಪ್ರಕಟಣೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2015, 6:26 IST
Last Updated 5 ಸೆಪ್ಟೆಂಬರ್ 2015, 6:26 IST

ನವದೆಹಲಿ (ಪಿಟಿಐ): ಮಾಜಿ ಸೈನಿಕರ ಜತೆಗಿನ ಬಿಕ್ಕಟ್ಟಿನ ಹೊರತಾಗಿಯೂ ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆಯನ್ನು ಕೇಂದ್ರ ಸರ್ಕಾರ ಇಂದು (ಶನಿವಾರ) ಪ್ರಕಟಿಸುವ ಸಾಧ್ಯತೆಗಳಿವೆ.

ಯೋಜನೆಯನ್ನು ಇಂದು ಪ್ರಕಟಿಸುವ ಸಾಧ್ಯತೆಯ ಬಗ್ಗೆ ಸರ್ಕಾರಿ ಅಧಿಕಾರಿಗಳ ವಲಯದಲ್ಲಿ ಮಾತು ಕೇಳಿಬರುತ್ತಿದೆ.

ಒಆರ್‌ಒಪಿ ಯೋಜನೆಯನ್ನು 2014ರ ಜುಲೈನಿಂದ ಪೂರ್ವಾನ್ವಯವಾಗುವಂತೆ ಹಾಗೂ ಪ್ರತಿ ಐದು ವರ್ಷಗಳಿಗೊಮ್ಮೆ ಪಿಂಚಣಿ ಮೊತ್ತವನ್ನು ಪರಿಷ್ಕರಿಸುವ ಪ್ರಸ್ತಾವಗಳನ್ನು ಒಳಗೊಂಡಿರುವ ಕರಡಿಗೆ ಶುಕ್ರವಾರ ಕೊನೆಗೊಂಡ ಮೂರು ದಿನಗಳ ಆರೆಸೆಸ್ಸ್‌ ಬೈಠಕ್‌ನಲ್ಲಿ ಅನುಮೋದನೆ ಪಡೆಯಲಾಗಿದೆ ಎನ್ನಲಾಗಿದೆ.

ADVERTISEMENT

ಸಹಮತ ಇಲ್ಲ: ಪಿಂಚಣಿಯನ್ನು ಐದು ವರ್ಷಗಳಿಗೊಮ್ಮೆ ಪರಿಷ್ಕರಿಸುವ ಪ್ರಸ್ತಾವಕ್ಕೆ ಮಾಜಿ ಸೈನಿಕರು ಸಹಮತ ಸೂಚಿಸಿಲ್ಲ. ಎರಡು ವರ್ಷಗಳಿಗೊಮ್ಮೆ ಪರಿಷ್ಕರಿಸಿದರೆ ಸಮ್ಮತಿಸಬಹುದು ಎಂಬುದು ಮಾಜಿ ಯೋಧರ ಅಭಿಪ್ರಾಯ.

ಒಂದು ಶ್ರೇಣಿ ಒಂದು ಪಿಂಚಣಿ ಯೋಜನೆಯ ಜಾರಿಗೆ ಒತ್ತಾಯಿಸಿ ಕಳೆದ 82 ದಿನಗಳಿಂದ ಮಾಜಿ ಸೈನಿಕರು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.