ADVERTISEMENT

ಒಡಿಯಾ ಶಾಸ್ತ್ರೀಯ ಭಾಷೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2014, 19:30 IST
Last Updated 20 ಫೆಬ್ರುವರಿ 2014, 19:30 IST

ಭುವನೇಶ್ವರ: ಒಡಿಯಾ ಭಾಷೆಗೆ ಶಾಸ್ತ್ರೀಯ  ಸ್ಥಾನಮಾನ ನೀಡುವ ಪ್ರಸ್ತಾ­ವಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಗುರುವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ  ಒಪ್ಪಿಗೆ ನೀಡಿದೆ.

ಶಾಸ್ತ್ರೀಯ ಸ್ಥಾನಮಾನ ಪಡೆದ ಆರನೇ ಭಾಷೆ ಹಾಗೂ ಮೊದಲ ದ್ರಾವಿಡೇತರ ಭಾಷೆ ಎಂಬ ಹೆಗ್ಗಳಿಕೆಗೆ ಒಡಿಯಾ ಪಾತ್ರವಾಗಲಿದೆ.
ಶಾಸ್ತ್ರೀಯ ಸ್ಥಾನಮಾನ ಪಡೆದ ಕನ್ನಡ, ತಮಿಳು, ತೆಲುಗು, ಮಲ­ಯಾಳಂ ಮತ್ತು ಪ್ರಾಚೀನ ಸಂಸ್ಕೃತ ಭಾಷೆಗಳ ಸಾಲಿಗೆ ಈಗ ಒಡಿಯಾ ಕೂಡ ಸೇರಲಿದೆ. 

ಒಡಿಯಾ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ನೀಡುವ ಕೇಂದ್ರ ಸಂಪುಟದ ನಿರ್ಧಾರ ಹೊರಬೀಳು­ತ್ತಲೇ ಒಡಿಶಾದಾದ್ಯಂತ ಸಂಭ್ರಮ ಮನೆಮಾಡಿದೆ.

ಭಾಷಾ ತಜ್ಞರು, ಸಾಹಿತಿಗಳು, ಶಿಕ್ಷಣ ತಜ್ಞರು, ರಾಜಕೀಯ ಮುಖಂಡರು ಕೇಂದ್ರ  ಸಂಪುಟದ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಶಾಸ್ತ್ರೀಯ ಸ್ಥಾನಮಾನ ದೊರಕುವಲ್ಲಿ ಒಡಿಯಾ ಭಾಷಾ ಅಭಿವೃದ್ಧಿ ಪ್ರಾಧಿಕಾರ ಸಾಕಷ್ಟು ಕೆಲಸ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.