ADVERTISEMENT

ಕಸಾಯಿ ಖಾನೆ ನಿಷೇಧ: ಉಪಹಾರ ಮಂದಿರಗಳಲ್ಲಿ ಮಾಂಸದ ಕೊರತೆ

ಏಜೆನ್ಸೀಸ್
Published 23 ಮಾರ್ಚ್ 2017, 12:11 IST
Last Updated 23 ಮಾರ್ಚ್ 2017, 12:11 IST
ಕಸಾಯಿ ಖಾನೆ ನಿಷೇಧ: ಉಪಹಾರ ಮಂದಿರಗಳಲ್ಲಿ ಮಾಂಸದ ಕೊರತೆ
ಕಸಾಯಿ ಖಾನೆ ನಿಷೇಧ: ಉಪಹಾರ ಮಂದಿರಗಳಲ್ಲಿ ಮಾಂಸದ ಕೊರತೆ   

ಲಖನೌ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಕಸಾಯಿ ಖಾನೆಗಳ ಮೇಲೆ ನಿಷೇಧ ಹೇರಿದ ನಂತರ ಉತ್ತರ ಪ್ರದೇಶದಲ್ಲಿನ ಮಾಂಸಹಾರಿ ಉಪಹಾರ ಮಂದಿರಗಳು ಮಾಂಸದ ಕೊರತೆ ಎದುರಿಸುತ್ತಿವೆ.

ಯೋಗಿ ಆದಿತ್ಯನಾಥ್‌ ಅವರು ಅಧಿಕಾರ ಸ್ವೀಕರಿಸಿದ ನಂತರ(ಮಾರ್ಚ್‌22) ಕಸಾಯಿ ಖಾನೆಗಳ ಮೇಲೆ ನಿಷೇಧ ಹೇರಿದ್ದರು. ಇದರಿಂದಾಗಿ ಮಾಂಸದ ಸರಬರಾಜಿನ ಮೇಲೆ ತೀವ್ರ ಪರಿಣಾಮ ಉಂಟಾಗಿದೆ.

ಉತ್ತರ ಪ್ರದೇಶದಾದ್ಯಂತ ಸಾಕಷ್ಟು ಜನಪ್ರಿಯತೆ ಹೊಂದಿರುವ ಶತಮಾನಗಳಷ್ಟು ಹಳೆಯ ‘ಲಕ್ನೋ ವೇಲ್‌ ತಂಡೇ ಕಬಾಬಿ’ ಹೋಟೆಲ್‌ನ ಉಪ ಶಾಖೆಯ ಮಾಲೀಕ ಮಹಮದ್ ಉಸ್ಮಾನ್ ಅವರು, ನಮ್ಮ  ಹೋಟೆಲ್‌ ಮಾಂಸಾಹಾರಕ್ಕೇ ಜನಪ್ರಿಯ. ಆದರೆ, ಆದೇಶದ ಕಾರಣದಿಂದಾಗಿ ಎಮ್ಮೆ ಹಾಗೂ ಗೋಮಾಂಸದ ಸರಬರಾಜು ಗಣನೀಯವಾಗಿ ಇಳಿದಿದೆ.

ADVERTISEMENT

ನಾವು ನಮ್ಮ ಆಹಾರ ಪಟ್ಟಿಯಲ್ಲಿ ಮಾರ್ಪಾಡು ಮಾಡಿಕೊಂಡಿದ್ದೇವೆ. ಬುಧವಾರ ಮಧ್ಯಾಹ್ನದಿಂದಲೇ ಎಮ್ಮೆ ಹಾಗೂ ಗೋಮಾಂಸದ ಲಭ್ಯತೆ ನಿಂತಿದೆ. ಕೇವಲ ಕೋಳಿ, ಮೇಕೆ ಹಾಗೂ ಕುರಿ ಕಬಾಬ್‌ಗಳನ್ನಷ್ಟೇ ಮಾರಾಟ ಮಾಡುತ್ತಿದ್ದೇವೆ’ ಎಂದು ಹೇಳಿದ್ದಾರೆ.

‘ರಾಜ್ಯದ 75 ಜಿಲ್ಲೆಗಳಲ್ಲೂ ಕಸಾಯಿ ಖಾನೆಗಳ ತಪಾಸಣೆಗೆ ಆದೇಶ ನೀಡಿದ್ದೇವೆ. ಲಕ್ನೋ ಪಾಲಿಕೆ ವತಿಯಿಂದ 9 ಕಸಾಯಿಖಾನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ’ ಎಂದು ಉತ್ತರ ಪ್ರದೇಶ ಮುಖ್ಯಕಾರ್ಯದರ್ಶಿ ರಾಹುಲ್‌ ಭಟ್ನಾಕರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.