ADVERTISEMENT

ಕಾಂಗ್ರೆಸ್‌ ‘ಕೈ’ ಬಿಟ್ಟ ಶಂಕರ್‌ಸಿಂಗ್‌ ವಘೇಲಾ

ಏಜೆನ್ಸೀಸ್
Published 21 ಜುಲೈ 2017, 11:57 IST
Last Updated 21 ಜುಲೈ 2017, 11:57 IST
ಶಂಕರ್‌ಸಿಂಗ್‌ ವಘೇಲಾ
ಶಂಕರ್‌ಸಿಂಗ್‌ ವಘೇಲಾ   

ಅಹ್ಮದಾಬಾದ್‌: ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಶಂಕರ್‌ಸಿಂಗ್‌ ವಘೇಲಾ ಕಾಂಗ್ರೆಸ್‌ ಪಕ್ಷವನ್ನು ತೊರೆದಿದ್ದಾರೆ. ತಮ್ಮ 77ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ವಘೇಲಾ ತಮ್ಮ ನಿರ್ಧಾರ ಘೋಷಿಸಿದ್ದಾರೆ.

ಸಮಾರಂಭದಲ್ಲಿ ಕೇಸರಿ ಅಂಗವಸ್ತ್ರ ಧರಿಸಿದ್ದ ವಘೇಲಾ, ‘ಕಾಂಗ್ರೆಸ್‌ನ ಕುತಂತ್ರಗಳಿಗೆ ಬಲಿಪಶುವಾದವನು ನಾನು’ ಎಂದಿದ್ದಾರೆ.

‘ನಾನು ಈ ಸಮಾರಂಭದಲ್ಲಿ ಏನು ಹೇಳಿಬಿಡುತ್ತೇನೋ ಎಂದು ಭೀತಿಗೊಂಡಿದ್ದ ಕಾಂಗ್ರೆಸ್‌ 24 ಗಂಟೆಗಳ ಹಿಂದೆಯೇ ನನ್ನನ್ನು ಪಕ್ಷದಿಂದ ಹೊರಹಾಕಿದೆ’ ಎಂದು ಹೇಳಿದ್ದಾರೆ.

ಆದರೆ, ವಘೇಲಾ ಅವರ ಆರೋಪವನ್ನು ತಳ್ಳಿಹಾಕಿರುವ ಕಾಂಗ್ರೆಸ್‌ ವಕ್ತಾರ ರಂದೀಪ್‌ ಸಿಂಗ್‌ ಸುರ್ಜೆವಾಲಾ, ‘ವಘೇಲಾ ಅವರ ವಿರುದ್ಧ ಪಕ್ಷ ಯಾವುದೇ ಕ್ರಮ ಕೈಗೊಂಡಿಲ್ಲ. ಅವರನ್ನು ಪಕ್ಷದಿಂದ ಹೊರಕ್ಕೂ ಹಾಕಿಲ್ಲ. ಅವರು ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಪಕ್ಷ ತೊರೆದಿರುವುದು ಅವರ ವೈಯಕ್ತಿಕ ನಿರ್ಧಾರ’ ಎಂದಿದ್ದಾರೆ.

ADVERTISEMENT

‘ರಾಜ್ಯ ಕಾಂಗ್ರೆಸ್‌ನ ಈಗಿರುವ ಅಧ್ಯಕ್ಷರನ್ನು ತೆಗೆದುಹಾಕಿ ತಮ್ಮನ್ನು ಅಧ್ಯಕ್ಷರನ್ನಾಗಿ ನೇಮಿಸಬೇಕೆಂಬುದು ವಘೇಲಾ ಬಯಕೆಯಾಗಿತ್ತು. ಆದರೆ, ಕಾಂಗ್ರೆಸ್‌ನಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ’ ಎಂದು ಸುರ್ಜೆವಾಲಾ ತಿಳಿಸಿದ್ದಾರೆ.

‘ನಾನು ಈಗಲೇ ರಾಜಕೀಯದಿಂದ ನಿವೃತ್ತನಾಗಲಾರೆ. ನನಗೆ ಈಗ 77 ವರ್ಷ. ನಾನು ಸೋತಿಲ್ಲ. ಸೋಲುವುದೂ ಇಲ್ಲ. ಆದರೆ, ನಾನು ಬಿಜೆಪಿ ಸೇರಲಾರೆ’ ಎಂದು ವಘೇಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.