ADVERTISEMENT

ಜಯಾ ಪರ ಜಾಮೀನು ಅರ್ಜಿಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2014, 10:54 IST
Last Updated 28 ಸೆಪ್ಟೆಂಬರ್ 2014, 10:54 IST

ಬೆಂಗಳೂರು/ಚೆನೈ(ಪಿಟಿಐ): ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಸೇರಿದ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಪರ ವಕೀಲರು  ಕರ್ನಾಟಕ ಹೈಕೋರ್ಟ್‌ನಲ್ಲಿ ಸೋಮವಾರ ಜಾಮೀನು ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.

‘ಕರ್ನಾಟಕ ಹೈಕೋರ್ಟಿನಲ್ಲಿ ಸೋಮವಾರ ಜಯಲಲಿತಾ ಅವರ ಪರವಾಗಿ ಜಾಮೀನು ಅರ್ಜಿ ಸಲ್ಲಿಸಲಿದ್ದೇವೆ’ ಎಂದು ಜಯಲಲಿತಾ  ಪರ ಹಿರಿಯ ವಕೀಲ ಬಿ.ಕುಮಾರ್‌ ಅವರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಆದರೆ ಸೆಪ್ಟಂಬರ್ 29ರಿಂದ ಆಗಸ್ಟ್‌ 6ರವರೆಗೆ ಹೈಕೋರ್ಟ್‌ಗೆ ದಸರಾ ರಜೆಯಿದ್ದು, ಮಂಗಳವಾರ ಕಾರ್ಯ ನಿರ್ವಹಿಸಲಿರುವ ರಜಾ ಕಾಲ ಪೀಠ ಜಯಲಲಿತಾ ಅವರ ಜಾಮೀನು ಅರ್ಜಿಯನ್ನು  ವಿಚಾರಣೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ADVERTISEMENT

ಇದೇ ವೇಳೆ, ಜಯಲಲಿತಾ ಅವರಿಗೆ ವಿಧಿಸಿರುವ ಶಿಕ್ಷೆಗೆ ತಡೆಯಾಜ್ಞೆ ಕೋರಲು ಅರ್ಜಿ ಸಲ್ಲಿಸುವ ಬಗ್ಗೆಯೂ ವಕೀಲ ತಂಡ ಚರ್ಚೆ ನಡೆಸುತ್ತಿದೆ ಎಂದೂ ಕುಮಾರ್ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.