ADVERTISEMENT

ಜಯಾ ಸಾವಿನ ರಹಸ್ಯ ಬಹಿರಂಗಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2017, 19:30 IST
Last Updated 24 ಸೆಪ್ಟೆಂಬರ್ 2017, 19:30 IST
ಜಯಾ ಸಾವಿನ ರಹಸ್ಯ ಬಹಿರಂಗಕ್ಕೆ ಒತ್ತಾಯ
ಜಯಾ ಸಾವಿನ ರಹಸ್ಯ ಬಹಿರಂಗಕ್ಕೆ ಒತ್ತಾಯ   

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರ ಆರೋಗ್ಯ ಪರಿಸ್ಥಿತಿಯ ಬಗ್ಗೆ ಸುಳ್ಳು ಹೇಳಿರುವುದಾಗಿ ಅರಣ್ಯ ಸಚಿವ ದಿಂಡಿಗಲ್‌ ಶ್ರೀನಿವಾಸನ್‌ ಹೇಳಿಕೆ ನೀಡಿದ ಬೆನ್ನಲ್ಲೇ ಜಯಾ ಸಾವಿನ ತನಿಖೆ ನಡೆಸುವಂತೆ ವಿರೋಧಪಕ್ಷಗಳಾದ ಡಿಎಂಕೆ, ಕಾಂಗ್ರೆಸ್‌, ಬಿಜೆಪಿ, ಪಿಎಂಕೆ ಮತ್ತು ಎಡ ಪಕ್ಷಗಳು ಒತ್ತಾಯಿಸಿವೆ.

ಈ ನಡುವೆ ಸಾವಿನ ಬಗ್ಗೆ ಇರುವ ಸಂಶಯವನ್ನು ನಿವಾರಿಸುವಂತೆ ಜಯಾ ಅವರ ಸೊಸೆ ದೀಪಾ ಜಯಕುಮಾರ್‌ ಅವರು ಕೋರ್ಟ್‌ ಮೊರೆ ಹೋಗಿದ್ದಾರೆ.  ಜಯಾ ಸಾವಿನ ಕುರಿತ ತನಿಖೆಯನ್ನು ಕೇಂದ್ರ ಸರ್ಕಾರ ಸಿಬಿಐಗೆ ವಹಿಸಬೇಕು ಎಂದು ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್‌ ಒತ್ತಾಯಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಥವಾ  ಹೈಕೋರ್ಟ್‌ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ತಮಿಳುನಾಡು ಕಾಂಗ್ರೆಸ್‌ ಅಧ್ಯಕ್ಷ ಎಸ್‌. ತಿರುನಾವುಕ್ಕರಸರ್‌ ಅವರು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.