ಶ್ರೀಹರಿಕೋಟಾ (ಎಪಿ): ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಗುರುವಾರ ಉಡಾವಣೆ ಮಾಡಲಾದ ‘ಜಿಎಸ್ಎಲ್ವಿ–ಮಾರ್ಕ್ 3’ ಪ್ರಾಯೋಗಿಕ ಪರೀಕ್ಷೆ ಯಶಸ್ಸು ಕಂಡಿದ್ದು, ಭಾರತದ ಬಾಹ್ಯಾಕಾಶ ಯೋಜನೆಗಳಿಗೆ ಮತ್ತಷ್ಟು ಬಲ ಬಂದಂತಾಗಿದೆ.
‘ಜಿಎಸ್ಎಲ್ವಿ–ಮಾರ್ಕ್ 3’ ಜಿಎಸ್ಎಲ್ವಿ ಸರಣಿಯ ರಾಕೆಟ್ಗಳಲ್ಲಿ ಅತ್ಯಾಧುನಿಕವಾಗಿದ್ದು, ಮುಂದಿನ ತಲೆಮಾರಿಗೆ ಸೇರಿದೆ. ಈ ಉಡಾವಣೆಯಲ್ಲಿ ‘ಇಸ್ರೊ’ ಎರಡು ಉದ್ದೇಶಗಳನ್ನು ಹೊಂದಿತ್ತು.
ಭಾರಿ ತೂಕದ ಉಪಗ್ರಹಗಳ ಉಡಾವಣೆಯಲ್ಲಿ ಸ್ವಾವಲಂಬನೆ ಸಾಧಿಸುವುದು ಹಾಗೂ ಬಾಹ್ಯಾಕಾಶಕ್ಕೆ ಮಾನವರನ್ನು ಕಳುಹಿಸಲು ಸಾಧ್ಯವಾಗುವಂತಹ ಅಂತರಿಕ್ಷ ನೌಕೆಯನ್ನು ಉಡಾವಣೆ ಮಾಡಿ ಅದನ್ನು ಸುರಕ್ಷಿತವಾಗಿ ಭೂಮಿಗೆ ಮರಳಿ ತರುವುದು.
ಈ ಪ್ರಾಯೋಗಿಕ ಉಡಾವಣೆಯ ಯಶಸ್ಸು ‘ಇಸ್ರೊ’ದ ಭವಿಷ್ಯದ ಯೋಜನೆಗಳಿಗೆ ಭದ್ರ ಬುನಾದಿ ಹಾಕಿದೆ.
‘ಜಿಎಸ್ಎಲ್ವಿ –ಮಾರ್ಕ್ 3’ ನಾಲ್ಕು ಸಾವಿರ ಕೆ.ಜಿಗೂ ಹೆಚ್ಚು ತೂಕದ ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಗೆ ಕೊಂಡೊಯ್ಯುವ ಸಾಮರ್ಥ್ಯ
ಸಮಯ ರಾಕೆಟ್ ತೂಕ ಅಂತರಿಕ್ಷ ನೌಕೆ ತೂಕ ರಾಕೆಟ್ ವೆಚ್ಚ ಅಂತರಿಕ್ಷ ನೌಕೆ ವೆಚ್ಚ |
ಹೊಂದಿದೆ. ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸಲು ಇಸ್ರೊಗೆ ಕನಿಷ್ಠ ಹತ್ತು ವರ್ಷಗಳು ಹಿಡಿಯಲಿವೆ. ಆದರೆ, ಅಂತರಿಕ್ಷ ನೌಕೆಯನ್ನು 126 ಕಿ.ಮೀ. ಎತ್ತರಕ್ಕೆ ಚಿಮ್ಮಿಸಿ ಅದಕ್ಕೆ ಯಾವುದೇ ಹಾನಿಯಾಗದಂತೆ ಕೆಳಕ್ಕೆ ಇಳಿಸಿರುವುದು ಮಹತ್ವದ ಘಟ್ಟ. ಅಂತರಿಕ್ಷ ನೌಕೆಯಿಂದ ಸಂದೇಶವನ್ನು ಸಹ ಪಡೆಯಲಾಗಿದೆ ಎಂದು ಇಸ್ರೊದ ಮಾನವಸಹಿತ ಬಾಹ್ಯಾಕಾಶ ಯೋಜನೆ ನಿರ್ದೇಶಕ ಎಸ್.ಉನ್ನಿಕೃಷ್ಣನ್ ನಾಯರ್ ತಿಳಿಸಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಸಮೂಹದ ತುದಿಯಲ್ಲಿರುವ ಇಂದಿರಾ ಪಾಯಿಂಟ್ನಿಂದ 180 ಕಿ. ಮೀ. ದೂರದಲ್ಲಿ ಬಂಗಾಳ ಕೊಲ್ಲಿಯಲ್ಲಿ 12 ನಿಮಿಷಗಳ ನಂತರ ಈ ನೌಕೆ ಇಳಿದಿದೆ.
2 ಅಥವಾ 3 ಗಗನಯಾತ್ರಿಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿರುವ ನೌಕೆ ಭೂವಾತಾವರಣ ಪ್ರವೇಶಿಸುವಾಗ 1600 ಡಿಗ್ರಿ ಸೆಲ್ಸಿಯಸ್ಗಳಷ್ಟು ಉಷ್ಣಾಂಶವನ್ನು ತಡೆದುಕೊಂಡಿತ್ತು.
ಕಪ್ ಕೇಕ್ ಮಾದರಿಯ ಅಂತರಿಕ್ಷ ನೌಕೆ 3650 ಕೆ.ಜಿ. ತೂಕದ್ದಾಗಿರುವುದು ವಿಶೇಷ. 2007ರಲ್ಲಿ ಪಿಎಸ್ಎಲ್ವಿ ರಾಕೆಟ್ ಮೂಲಕ 555 ಕೆ.ಜಿ. ತೂಕದ ಘಟಕವೊಂದನ್ನು ಉಡಾವಣೆ ಮಾಡಿ ವಾಪಸು ಪಡೆಯಲಾಗಿತ್ತು. ಆದರೆ ಅದು ಮಾನವರನ್ನು ಕೊಂಡೊಯ್ಯುವಂತಹ ನೌಕೆಯಾಗಿರಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.