ADVERTISEMENT

ಟೀಕೆಗೆ ಗುರಿಯಾದ ರಾಹುಲ್‌ ತಂಡ

ಅನುಭವಸ್ಥರಿಗೆ ನಾಯಕತ್ವ ವಹಿಸಲು ಮುಖಂಡರ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಮೇ 2014, 19:30 IST
Last Updated 22 ಮೇ 2014, 19:30 IST

ನವದೆಹಲಿ (ಪಿಟಿಐ/ಐಎಎನ್‌ಎಸ್‌): ಕ್ಷೇತ್ರ ಮಟ್ಟದ ಕೆಲಸದ ಅನುಭವ­ವಿರುವ ಮುಖಂಡರಿಗೆ ನಾಯಕತ್ವದ ಹುದ್ದೆ ಕೊಟ್ಟು ಪಕ್ಷದ ಪುನಶ್ಚೇತನಕ್ಕೆ ಕಠಿಣ ಕ್ರಮ ಅನುಸರಿಸ­ಬೇಕು ಎನ್ನುವ ಮೂಲಕ ಕಾಂಗ್ರೆಸ್‌ನ ಕೆಲವು ಮುಖಂ­ಡರು ‘ಪಕ್ಷದ ಸೋಲಿಗೆ ರಾಹುಲ್ ತಂಡವೇ ಕಾರಣ’ ಎಂದು ಪರೋಕ್ಷ­ವಾಗಿ ಹೇಳಿದ್ದಾರೆ.

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ನೇರ ಟೀಕಿಸದೆ ಅವರ ತಂಡವನ್ನು ತರಾಟೆಗೆ ತೆಗೆದು­ಕೊಂಡಿ­­­ರುವ ಮುಖಂಡರು, ‘ಗಂಭೀರ ಆತ್ಮ­ವಿಮರ್ಶೆ’ಗೆ ಸೂಚಿಸಿ­ದ್ದಾರೆ. ಆದರೆ ಅಮೃತಸರ­ದಿಂದ ಗೆದ್ದಿರುವ ಕ್ಯಾಪ್ಟನ್‌ ಅಮ-­ರಿಂದರ್‌ ಸಿಂಗ್‌ ಅವರಂ­ತಹ ನಾಯ­ಕರು, ಪಕ್ಷದ ಸೋಲಿಗೆ ‘ಸಾಮೂ­ಹಿಕ ಹೊಣೆಗಾರಿಕೆ’ ಹೊರ­ಬೇಕೆಂದು ಸಲಹೆ ಮಾಡಿದ್ದಾರೆ.

ರಾಹುಲ್ ಸಲಹೆಗಾರರು ತಳ­ಮಟ್ಟದ ಕಾರ್ಯಕರ್ತರ ಮಾತನ್ನು ಆಲಿಸ­ಲಿಲ್ಲ ಮತ್ತು ಅವರಿಗೆ ಚುನಾ­ವಣಾ ಪ್ರಚಾರದ ಅನುಭವವಿರಲಿಲ್ಲ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಮಿಲಿಂದ್ ದೇವ್ರಾ ಬುಧ­ವಾರ ಟೀಕಿಸಿ­ದ್ದರು. ಅವರು ತಮ್ಮ ನಿಲು­ವಿಗೆ ಬದ್ಧ­ರಾಗಿದ್ದು, ‘ಪಕ್ಷದ ಬಗ್ಗೆ ಇರುವ ಅತಿ­ಯಾದ ವಿಧೇಯತೆ ಮತ್ತು ಕಾಳ­ಜಿಯೇ ತಮ್ಮ ಹೇಳಿಕೆಗೆ ಕಾರಣ’ ಎಂದು ಗುರುವಾರ ತಿಳಿಸಿದ್ದಾರೆ.

ಪಕ್ಷವು ಹೀನಾಯವಾಗಿ ಸೋತಿದ್ದ­ರಿಂದ ಮನನೊಂದು ಹೇಳಿಕೆ ನೀಡಿರು­ವು­ದಾಗಿ ತಿಳಿಸಿರುವ ಅವರು, ಪಕ್ಷವು ಪುನಶ್ಚೇತನ­ಗೊಂಡು ಮತ್ತೆ ಮೊದಲಿ­ನಷ್ಟೇ ಬಲಿಷ್ಠ­ವಾಗಬೇಕೆಂದು ಟ್ವೀಟ್ ಮಾಡಿದ್ದಾರೆ. ಪಕ್ಷದ ಕೆಳಮಟ್ಟದ ಕಾರ್ಯ­ಕರ್ತರು ಮತ್ತು ಕ್ಷೇತ್ರ ಪ್ರಚಾರ ತಂತ್ರಗಾರಿಕೆ ಪ್ರಮುಖ ಅಂಶ­ಗಳು. ಇದನ್ನು ಅನು­ಸರಿಸ­­ದಿ­ರುವುದೇ ಸೋಲಿಗೆ ಮುಖ್ಯ ಕಾರಣ ಎಂದು ರಾಹುಲ್ ತಂಡದ ವೈಫ­ಲ್ಯ­ವ­ನ್ನು ಪರೋಕ್ಷ­ವಾಗಿ ಟೀಕಿಸಿದ್ದಾರೆ.

ಪಕ್ಷದ ಇನ್ನೊಬ್ಬ ಹಿರಿಯ ಮುಖಂ­ಡ­­ರಾದ ಸತ್ಯವ್ರತ ಚತುರ್ವೇದಿ ಅವರೂ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿ­ಸಿದ್ದು, ಪಕ್ಷದ ಪುನಶ್ಚೇತನಕ್ಕೆ ಕಠಿಣ ಕ್ರಮ ಅಗತ್ಯ ಎಂದು ತಿಳಿಸಿದ್ದಾರೆ. 

ಎಐಸಿಸಿ ಕಾರ್ಯದರ್ಶಿ ಪ್ರಿಯಾ ದತ್ ಅವರು ಸೋನಿಯಾ ಅವರನ್ನು ಭೇಟಿ­ಯಾಗಿ ಪಕ್ಷದ ಮುಖಂಡರು ಮತ್ತು ಜರ ಮಧ್ಯೆ ಸಂಪರ್ಕ ಏರ್ಪಡ­ದಿ­ರು­­ವುದು ಸೋಲಿಗೆ ಮುಖ್ಯ ಕಾರಣ ಎಂದು ವಿವರಿಸಿದ್ದಾರೆ ಎನ್ನಲಾ­ಗಿದೆ. ದೇವ್ರಾ ಮತ್ತು ಪ್ರಿಯಾ ಅವರಿ­ಬ್ಬರೂ ರಾಹುಲ್‌ ತಂಡದಲ್ಲಿದ್ದು ಚುನಾವಣೆ­ಯಲ್ಲಿ ಸೋತಿ­ದ್ದಾರೆ.

ಪ್ರಿಯಾಂಕಾಗೆ ಮಹತ್ವದ ಹುದ್ದೆ ನೀಡಲು ಆಗ್ರಹ
ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷವು ಕಳಪೆ ಸಾಧನೆ ಮಾಡಿರುವುದರಿಂದ ಪ್ರಿಯಾಂಕಾ ವಾಧ್ರಾ ಸೇರಿದಂತೆ ಯುವಕರು ಪಕ್ಷದ ನೇತೃತ್ವ ವಹಿಸಬೇಕು ಎಂಬುದು ಬಹುತೇಕ ಕಾರ್ಯಕರ್ತರ ಅಭಿಪ್ರಾಯವಾಗಿದೆ ಎಂದು ನಿರ್ಗಮಿಸುತ್ತಿರುವ ಸಚಿವ ಕೆ. ವಿ. ಥಾಮಸ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಿಯಾಂಕಾ ಅವರು ಅವರ ಅಜ್ಜಿ ಇಂದಿರಾಗಾಂಧಿ ಅವರನ್ನು ಹೋಲುವುದರಿಂದ ದೇಶದ ಜನತೆ ಮತ್ತು ಕಾರ್ಯಕರ್ತರು ಅವರ ನೇತೃತ್ವ ಬಯಸುತ್ತಿದ್ದಾರೆ ಎಂದು ಥಾಮಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಪ್ರಿಯಾಂಕಾ ಅವರಿಗೆ ಪಕ್ಷದಲ್ಲಿ ದೊಡ್ಡ ಜವಾಬ್ದಾರಿ ವಹಿಸುವುದು ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬಿಟ್ಟಿದ್ದು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.