ADVERTISEMENT

ತಂದೆಯಿಂದಲೇ ಮಗಳ ಮಾರಾಟ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2014, 19:30 IST
Last Updated 27 ಏಪ್ರಿಲ್ 2014, 19:30 IST

ಮುಜಫ್ಫರ್‌ನಗರ(ಪಿಟಿಐ): ಡೆಹ್ರಾಡೂನ್‌ ಮೂಲದ ವ್ಯಕ್ತಿ­ಯೊಬ್ಬರು 14 ವರ್ಷದ ಮಗಳನ್ನು ಹಣದ ಆಸೆ­ಗಾಗಿ ಮಾರಾಟ ಮಾಡು­ತ್ತಿದ್ದ ಸಂದರ್ಭ­ದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಸ್ವಯಂ ಸೇವಾ ಸಂಸ್ಥೆ ನೀಡಿದ ಮಾಹಿತಿಯ ಆಧಾರದ ಮೇಲೆ ಕಿವಾನ್‌ ಹಳ್ಳಿಯಲ್ಲಿ ದಾಳಿ ನಡೆಸಿ­ದಾಗ ಬಾಲಕಿಯ ತಂದೆಯು
₨ 90,000 ಗೆ ಮಗಳನ್ನು ಮಾರಾಟ ಮಾಡುತ್ತಿದ್ದರು. ಅವರನ್ನು ಬಂಧಿಸಿ, ಬಾಲಕಿಯನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.