ADVERTISEMENT

ತಕ್ಕ ಪ್ರತ್ಯುತ್ತರಕ್ಕೆ ಸರ್ಕಾರ ಬದ್ಧ: ರಾಜನಾಥ್

ಪಂಜಾಬ್‌ನಲ್ಲಿ ಉಗ್ರರ ದಾಳಿ ಘಟನೆ

​ಪ್ರಜಾವಾಣಿ ವಾರ್ತೆ
Published 30 ಜುಲೈ 2015, 9:21 IST
Last Updated 30 ಜುಲೈ 2015, 9:21 IST

ನವದೆಹಲಿ (ಪಿಟಿಐ): ಪಂಜಾಬ್‌ನ ಗುರುದಾಸಪುರದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ದೇಶದ ಭದ್ರತೆಗೆ ಆತಂಕ ಒಡ್ಡುವ ಶಕ್ತಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಸೃಷ್ಟಿಸಿದ ಕೋಲಾಹಲದ ನುಡುವೆಯೇ ಗುರುದಾಸಪುರ ಮೇಲಿನ ದಾಳಿ ಘಟನೆ ಸಂಬಂಧ ರಾಜನಾಥ್ ಸಿಂಗ್ ಅವರು ಹೇಳಿಕೆ ನೀಡಿದರು. ದಾಳಿ ನಡೆಸಿದ ಉಗ್ರರು ರಾವಿ ನದಿಯ ಮೂಲಕ ಪಾಕಿಸ್ತಾನದಿಂದ ಬಂದ್ದಿದ್ದರು ಎಂದು ಅವರು ತಿಳಿಸಿದರು. ಜಿಪಿಎಸ್‌ನಿಂದ ದೊರೆತ ಮಾಹಿತಿ ಆಧರಿಸಿ ಅವರು ಹೇಳಿಕೆ ನೀಡಿದ್ದಾರೆ.

ಅಲ್ಲದೇ, ದೇಶದಲ್ಲಿ ಭಯೋತ್ಪಾದನೆಗೆ ಸಂಚು ರೂಪಿಸುವ ಶಕ್ತಿಗಳನ್ನು ದಮನ ಮಾಡಲಾಗುವುದು. ದೇಶದ ಭದ್ರತೆಗೆ ಆತಂಕ ಒಡ್ಡಲು ಯತ್ನಿಸುವವರಿಗೆ ಸೂಕ್ತ ಪ್ರತ್ಯುತ್ತರ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.