ADVERTISEMENT

ತಿವಾರಿ ಸಾವು: ಹೆಚ್ಚಿದ ನಿಗೂಢತೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 19:34 IST
Last Updated 22 ಜೂನ್ 2017, 19:34 IST
ತಿವಾರಿ ಸಾವು: ಹೆಚ್ಚಿದ ನಿಗೂಢತೆ
ತಿವಾರಿ ಸಾವು: ಹೆಚ್ಚಿದ ನಿಗೂಢತೆ   

ಲಖನೌ: ಕರ್ನಾಟಕ ವೃಂದದ ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅವರ ಸಾವಿನ ನಿಗೂಢತೆ ಇನ್ನಷ್ಟು ಹೆಚ್ಚಿದೆ. ಅವರ ಸಾವಿಗೆ ಹೃದಯಾಘಾತ ಕಾರಣವಲ್ಲ ಎಂದು ವರದಿಯೊಂದು ಹೇಳಿದೆ.

ಸಾವಿನ ಕಾರಣ ಸ್ಪಷ್ಟವಾಗದ್ದರಿಂದ ಅನುರಾಗ್‌ ಅವರ ಹೃದಯ ಮತ್ತು ಇತರ ಒಳಾಂಗಗಳನ್ನು ಸಂರಕ್ಷಿಸಿ ಇರಿಸಲಾಗಿತ್ತು. ಹೃದಯದ ಪರೀಕ್ಷೆ ನಡೆಸಲಾಗಿದ್ದು, ಹೃದಯಾಘಾತದಿಂದ ಸಾವು ಸಂಭವಿಸಿಲ್ಲ ಎಂಬ ವರದಿ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೃದಯದ ಜತೆಗೆ ಒಳಾಂಗಗಳು ಮತ್ತು ರಕ್ತದ ರಾಸಾಯನಿಕ ವಿಶ್ಲೇಷಣೆಯನ್ನೂ ನಡೆಸಲಾಗಿದೆ. ಹೃದಯ ಸಂಬಂಧಿ ಸಮಸ್ಯೆಯಿಂದ ಸಾವು ಆಗಿಲ್ಲ ಎಂದು ಎಲ್ಲ ಪರೀಕ್ಷೆಗಳೂ ದೃಢಪಡಿಸಿವೆ.

ADVERTISEMENT

ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿರಲಿಲ್ಲ. ಆದರೆ ಉಸಿರುಗಟ್ಟಿ ಸಾವು ಸಂಭವಿಸಿರಬಹುದು ಎಂಬ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದರು.

ಅನುರಾಗ್‌ ಅವರ ಸಾವಿನ ತನಿಖೆಯನ್ನು ಸಿಬಿಐ ಈಗಾಗಲೇ ಆರಂಭಿಸಿದೆ. ಸಿಬಿಐ ತಂಡ ಬೆಂಗಳೂರಿಗೆ ಭೇಟಿ ನೀಡಿ ಅನುರಾಗ್‌ ಅವರ ಮೇಲಧಿಕಾರಿಗಳ ಹೇಳಿಕೆ ದಾಖಲಿಸಿಕೊಳ್ಳುವ ಸಾಧ್ಯತೆ ಇದೆ. ಅನುರಾಗ್‌ ಅವರನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸುತ್ತಿರುವ ಸಹೋದರ ಮಯಾಂಕ್‌ ತಿವಾರಿ ಅವರೂ ಸಿಬಿಐ ಅಧಿಕಾರಿಗಳ ಜತೆಗೆ ಬೆಂಗಳೂರಿಗೆ ಭೇಟಿ ನೀಡಬಹುದು ಎಂದು ಹೇಳಲಾಗಿದೆ.

ಸಾಯುವುದಕ್ಕೆ ಮೊದಲು ಗೆಳೆಯರೊಬ್ಬರ ಜತೆಗೆ ಅನುರಾಗ್‌ ಅವರು ತಂಗಿದ್ದ ಸರ್ಕಾರಿ ಅತಿಥಿ ಗೃಹದ ಕೊಠಡಿಗೆ ಸಿಬಿಐ ತಂಡ ಭೇಟಿ ಕೊಟ್ಟಿದೆ. ಮೃತದೇಹ ಪತ್ತೆಯಾದ ಸ್ಥಳಕ್ಕೂ ಹೋಗಿದೆ.

ಅನುರಾಗ್‌ ಸಾವಿನ ನಂತರ ಸಾವಿನ ಕಾರಣಕ್ಕೆ ಸಂಬಂಧಿಸಿ ವಿವಿಧ ರೀತಿಯ ವಿಶ್ಲೇಷಣೆಗಳು ನಡೆದಿವೆ. ತಮ್ಮ ಅವ್ಯವ ಹಾರಗಳನ್ನು ಬಯಲಿಗೆಳೆಯಬಹುದು ಎಂಬ ಭಯದಿಂದ ಅನುರಾಗ್‌ ಅವರ ಮೇಲಧಿಕಾರಿಗಳೇ ಈ ಕೊಲೆ ಮಾಡಿ ಸಿದ್ದಾರೆ ಎಂದು ಅವರ ಕುಟುಂ ಬದ ಸದಸ್ಯರು ಆರೋಪಿಸಿದ್ದರು.  ಅತಿಯಾದ ಔಷಧ ಸೇವನೆ ಸಾವಿಗೆ ಕಾರಣ ಆಗಿರಬಹುದು ಎಂಬ ಅನು ಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.