ADVERTISEMENT

ತೆಲಂಗಾಣಕ್ಕೆ ಯುಪಿಎ ಸಮನ್ವಯ ಸಮಿತಿ ಅಸ್ತು

ಆಂಧ್ರ ಇಬ್ಬಾಗ

​ಪ್ರಜಾವಾಣಿ ವಾರ್ತೆ
Published 30 ಜುಲೈ 2013, 13:21 IST
Last Updated 30 ಜುಲೈ 2013, 13:21 IST

ನವದೆಹಲಿ (ಐಎಎನ್‌ಎಸ್) : ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯಾಗುವ ಕಾಲ ಸನ್ನಿಹಿತವಾಗತೊಡಗಿದೆ. ಮಂಗಳವಾರ ಸಂಜೆ ಸಭೆ ಸೇರಿದ್ದ ಯುಪಿಎ ಸಮನ್ವಯ ಸಮಿತಿ ತೆಲಂಗಾಣ ರಚನೆಗೆ ಒಪ್ಪಿಗೆ ನೀಡಿದೆ. ಈ ಸಂಬಂಧ ಗುರುವಾರ ಬೆಳಿಗ್ಗೆ ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದ್ದು, ಅಲ್ಲಿ ಅಧಿಕೃತವಾಗಿ ಘೋಷಣೆಯಾಗುವ ನಿರೀಕ್ಷೆ ಇದೆ.

ತೆಲಂಗಾಣ ರಚನೆ ಸಂಬಂಧ ಪರ - ವಿರೋಧ ಅಭಿಪ್ರಾಯಗಳು ಕೇಳಿಬಂದಿದ್ದ ಹಿನ್ನೆಲೆಯಲ್ಲಿ ಯುಪಿಎ ಸಮನ್ವಯ ಸಮಿತಿಯು ಮಂಗಳವಾರ ಸಭೆ ಸೇರಿತ್ತು. ಪ್ರಧಾನಮಂತ್ರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್, ಎನ್‌ಸಿಪಿ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ರಾಷ್ಟ್ರೀಯ ಲೋಕ ದಳ ಪಾಲ್ಗೊಂಡಿದ್ದವು. ಈ ಸಭೆಯಲ್ಲಿ ಆಂಧ್ರ ವಿಭಜನೆಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.

ಈ ಮಧ್ಯೆ ಬುಧವಾರ ವಿಶೇಷ ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಇದರಲ್ಲಿ  ತೆಲಂಗಾಣ ರಾಜ್ಯ ರಚನೆ ವಿಷಯವೇ ಪ್ರಧಾನವಾಗಿ ಚರ್ಚೆಗೆ ಬರಲಿದೆ ಎಂದು ಮೂಲಗಳು ಖಚಿತಪಡಿಸಿವೆ. ಅಧಿಕೃತವಾಗಿ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ತೆಲಂಗಾಣಕ್ಕೆ ಅಸ್ತು ಎನ್ನುವ ಎಲ್ಲಾ ಸಾಧ್ಯತೆಗಳು ನಿಚ್ಚಳವಾಗ ತೊಡಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT