ADVERTISEMENT

ನಕ್ಸಲರ ವಿರುದ್ಧ ಬಹುಬೇಗ ಆರೋಪ

ರಾಜಧಾನಿ ಎಕ್ಸ್‌ಪ್ರೆಸ್ ಹಳ್ಳಿ ತಪ್ಪಿ ದುರಂತ

​ಪ್ರಜಾವಾಣಿ ವಾರ್ತೆ
Published 25 ಜೂನ್ 2014, 15:33 IST
Last Updated 25 ಜೂನ್ 2014, 15:33 IST

ನವದೆಹಲಿ (ಪಿಟಿಐ): ಬಿಹಾರದಲ್ಲಿ ದೆಹಲಿ-ದಿಬ್ರುಗಡ ರಾಜಧಾನಿ ಎಕ್ಸಪ್ರೆಸ್ ಹಳ್ಳಿ ತಪ್ಪಿ ನಾಲ್ಕು ಜನರು ಮೃತಪಟ್ಟ ಘಟನೆಗೆ ಬಹುಬೇಗ ನಕಲ್ಸರನ್ನು ಹೊಣೆಗಾರರನ್ನಾಗಿ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಹೇಳಿದರು.

`ಘಟನಾ ಸ್ಥಳದಲ್ಲಿರುವ ರೈಲ್ವೆ ಇಲಾಖೆಯ ಅಧಿಕಾರಿಗಳೊಂದಿಗೆ ನಾನು ನೇರವಾಗಿ ಮಾತನಾಡಿದ್ದೇನೆ. ದುರಂತದ ಎಲ್ಲ ಬೆಳವಣಿಗೆ ಕುರಿತಂತೆ ಪ್ರಧಾನ ಮಂತ್ರಿಗಳಿಗೆ ಮಾಹಿತಿ ನೀಡಿದ್ದೇನೆ. ಬಹುಬೇಗ ನಕಲ್ಸರ ವಿರುದ್ಧ ಆರೋಪ ಮಾಡಲಾಗಿದೆ ಎಂಬ ನನ್ನ ಹೇಳಿಕೆ ಅವರು ಕೂಡ ಸಹಮತ ವ್ಯಕ್ತಪಡಿಸಿದ್ದಾರೆ. ತನಿಖೆ ನಡೆದು ಪ್ರಕರಣ ಕುರಿತಂತೆ ಹೊರಬರುವ ವರದಿಗಾಗಿ ಕಾಯ್ದು ನೋಡೋಣ' ಎಂದು ಸಿಂಗ್ ಅವರು ವರದಿಗಾರರನ್ನು ಉದ್ದೇಶಿಸಿ ಹೇಳಿದರು.

ಆದಾಗ್ಯೂ, ಕೂಡ ಸಿಂಗ್ ಅವರ ಈ ದುರಂತದ ಹಿಂದೆ ಮಾವೋವಾದಿಗಳ ಕೈವಾಡ ಇರುವ ಶಂಕೆ ವ್ಯಕ್ತಪಡಿಸಿದರು.

ಪಾಟ್ನಾ­ದಿಂದ 75 ಕಿ.ಮೀ ದೂರದಲ್ಲಿರುವ ಗೋಲ್ಡನ್‌ ಗಂಜ್‌ ಬಳಿ ದೆಹಲಿ–ದಿಬ್ರುಗಡ ರಾಜಧಾನಿ ಎಕ್ಸ್‌ಪ್ರಸ್‌ ರೈಲು ಬುಧವಾರ ಬೆಳಗಿನ ಜಾವ ಹಳಿ ತಪ್ಪಿದ್ದು 12 ಬೋಗಿಗಳು ನೆಲಕ್ಕುರುಳಿವೆ. ಘಟನೆ­ಯಲ್ಲಿ ನಾಲ್ವರು ಪ್ರಯಾಣಿಕರು ಮೃತಪ­ಟ್ಟಿದ್ದು 8 ಜನರಿಗೆ ಗಂಭೀರ ಗಾಯಗ­ಳಾಗಿವೆ.

ಈ ಘಟನೆ ನಡೆದ ಸ್ಥಳ­ದಲ್ಲಿ ಮೂರು ಟೈಂ ಬಾಂಬ್‌ಗಳು ಪತ್ತೆ­ಯಾಗಿದ್ದು, ಇದೊಂದು ನಕ್ಸಲರ ಯೋಜಿತ ವಿಧ್ವಂಸಕ ಕೃತ್ಯ ಎಂದು ಶಂಕಿಸ­ಲಾ­ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.