ADVERTISEMENT

ನಾಪತ್ತೆಯಾಗಿದ್ದ ಬಾಲಕಿಯರು ಶಾರುಖ್‌ ಮನೆ ಬಳಿ ಪತ್ತೆ

ಪಿಟಿಐ
Published 25 ಮೇ 2017, 19:30 IST
Last Updated 25 ಮೇ 2017, 19:30 IST
ನಾಸಿಕ್‌: ಇಲ್ಲಿಂದ ನಾಪತ್ತೆಯಾಗಿದ್ದ ಆರು ಮಂದಿ ಬಾಲಕಿಯರು ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ಮುಂಬೈ ಹೊರವಲಯದಲ್ಲಿರುವ ಮನೆ ‘ಮನ್ನತ್‌’ ಬಳಿ ಪತ್ತೆಯಾಗಿದ್ದಾರೆ.
 
ಬಾಲಕಿಯರು ಮೇ 23ರಿಂದ ನಾಪತ್ತೆಯಾಗಿರುವುದಾಗಿ ಪಾಲಕರು ನಾಸಿಕ್‌ ಪೊಲೀಸರಿಗೆ ದೂರು ನೀಡಿದ್ದರು.
 
‘ನಂದೂರಿ ದೇವಾಲಯಕ್ಕೆಂದು ತೆರಳಿದ್ದ ಬಾಲಕಿಯರು ಬಳಿಕ ಶಾರುಖ್‌ ಖಾನ್‌ ಅವರನ್ನು ನೋಡುವ ಸಲುವಾಗಿ ರೈಲಿನಲ್ಲಿ  ದಾದರ್‌ಗೆ ತೆರಳಿದ್ದರು’ ಎಂದು ಪೊಲೀಸರು ತಿಳಿಸಿದ್ದಾರೆ. ‘ಬಾಲಕಿಯರನ್ನು ಸುರಕ್ಷಿತವಾಗಿ ಪಾಲಕರಿಗೆ ಒಪ್ಪಿಸಲಾಗಿದೆ’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.