ADVERTISEMENT

ಪಂಜಾಬ್‌ನ ಹಿರಿಯ ಪತ್ರಕರ್ತ ಕೆ.ಜೆ. ಸಿಂಗ್‌ ಮತ್ತವರ ತಾಯಿಯ ಹತ್ಯೆ

ಏಜೆನ್ಸೀಸ್
Published 23 ಸೆಪ್ಟೆಂಬರ್ 2017, 10:33 IST
Last Updated 23 ಸೆಪ್ಟೆಂಬರ್ 2017, 10:33 IST
ಕೆ.ಜೆ. ಸಿಂಗ್‌
ಕೆ.ಜೆ. ಸಿಂಗ್‌   

ಮೊಹಾಲಿ: ಪಂಜಾಬ್‌ನ ಹಿರಿಯ ಪತ್ರಕರ್ತ ಕೆ.ಜೆ. ಸಿಂಗ್‌ (60) ಮತ್ತು ಅವರ ತಾಯಿಯನ್ನು ಮೊಹಾಲಿಯ ಅವರ ನಿವಾಸದಲ್ಲಿ ಶನಿವಾರ ಹತ್ಯೆ ಮಾಡಲಾಗಿದೆ.

ಸಿಂಗ್‌ ಅವರ ಕತ್ತು ಸೀಳಿ ಕೊಲೆ ಮಾಡಲಾಗಿದೆ. ಅವರ ತಾಯಿ ಗುರುಚರಣ್‌ ಕೌರ್‌ (92) ಅವರನ್ನು ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮಧ್ಯಾಹ್ನ 1 ಗಂಟೆ ವೇಳೆಗೆ ಸಿಂಗ್‌ ಅವರ ಭೇಟಿಗೆಂದು ವ್ಯಕ್ತಿಯೊಬ್ಬರು ಅವರ ಮನೆಯೊಳಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಸಿಂಗ್ ಅವರಿಗೆ ಸೇರಿದ ಫೋರ್ಡ್‌ ಐಕಾನ್‌ ಕಾರು ಕಳುವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸಿಂಗ್‌ ಅವರು ‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಯ ಸುದ್ದಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು. ‘ದಿ ಟ್ರಿಬ್ಯುನ್‌’ ಮತ್ತು ‘ಟೈಮ್ಸ್‌ ಆಫ್‌ ಇಂಡಿಯಾ’ ಪತ್ರಿಕೆಗಳಲ್ಲೂ ಅವರು ಕೆಲಸ ಮಾಡಿದ್ದರು.

ಪತ್ರಕರ್ತರಾದ ಗೌರಿ ಲಂಕೇಶ್‌ ಮತ್ತು ಶಂತನು ಭೌಮಿಕ್‌ ಅವರ ಹತ್ಯೆ ಘಟನೆಗಳು ಮಾಸುವ ಮುನ್ನವೇ ಸಿಂಗ್‌ ಮತ್ತವರ ತಾಯಿಯ ಕೊಲೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.