ADVERTISEMENT

ಪಟ್ಟಣಕ್ಕೆ ಬಂದ ಆನೆಯ ದಾಂದಲೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2016, 19:48 IST
Last Updated 10 ಫೆಬ್ರುವರಿ 2016, 19:48 IST
ಸಿಲಿಗುರಿಯಲ್ಲಿ ಬುಧವಾರ ಪಟ್ಟಣಕ್ಕೆ ನುಗ್ಗಿ ದಾಂದಲೆ ಮಾಡಿದ ಆನೆಯನ್ನು ಕ್ರೇನ್ ಸಹಾಯದಿಂದ ಟ್ರಕ್‌ ಒಳಗೆ ಹತ್ತಿಸಲಾಯಿತು  ಎಎಫ್‌ಪಿ ಚಿತ್ರ
ಸಿಲಿಗುರಿಯಲ್ಲಿ ಬುಧವಾರ ಪಟ್ಟಣಕ್ಕೆ ನುಗ್ಗಿ ದಾಂದಲೆ ಮಾಡಿದ ಆನೆಯನ್ನು ಕ್ರೇನ್ ಸಹಾಯದಿಂದ ಟ್ರಕ್‌ ಒಳಗೆ ಹತ್ತಿಸಲಾಯಿತು ಎಎಫ್‌ಪಿ ಚಿತ್ರ   

ಸಿಲಿಗುರಿ, ಪಶ್ಚಿಮ ಬಂಗಾಳ (ಪಿಟಿಐ): ಇಲ್ಲಿನ ವೈಕುಂಠಪುರ ಅರಣ್ಯ ಪ್ರದೇಶದಿಂದ ದಾರಿತಪ್ಪಿ ಪಟ್ಟಣಕ್ಕೆ ಬಂದ ಒಂಟಿ ಸಲಗವೊಂದು ಏಳು ಗಂಟೆ ಕಾಲ  ಕಂಡಕಂಡಲ್ಲಿ ನುಗ್ಗಿ 40ಕ್ಕೂ ಹೆಚ್ಚು ಮನೆಗಳು ಮತ್ತು ಹಲವು ವಾಹನಗಳಿಗೆ ಹಾನಿ ಮಾಡಿದ ಘಟನೆ ನಡೆದಿದೆ.

ಉತ್ತರ ಬಂಗಾಳದ ದಾಬಗ್ರಾಮ ಮತ್ತು ಫುಲ್ಬರಿ ಪ್ರದೇಶಗಳಲ್ಲಿ ಬುಧವಾರ  ಮುಂಜಾನೆ ಆನೆ ಕಾಣಿಸಿಕೊಂಡಿತು. ಅದನ್ನು ಕಂಡ ಜನ ಭಯಭೀತರಾಗಿ ಅಡ್ಡಾದಿಡ್ಡಿ ಓಡಲು ಪ್ರಾರಂಭಿಸಿದರು. ಅರಣ್ಯ ಸಿಬ್ಬಂದಿ ಅರಿವಳಿಕೆ ನೀಡಿದರೂ ಪ್ರಯೋಜನವಾಗಲಿಲ್ಲ. ಬದಲಾಗಿ ಸಿಟ್ಟಿಗೆದ್ದ ಆನೆ ಮನೆಗಳ ಕಡೆಗೆ ನುಗ್ಗಿ ಗೋಡೆ, ಕಂಬಗಳಿಗೆ ಹಾನಿ ಮಾಡಿ ದಾಂದಲೆ ಎಬ್ಬಿಸಿತು.

ಅರಿವಳಿಕೆ ನೀಡಿದ ಏಳು ಗಂಟೆ ಬಳಿಕ ಕೊನೆಗೂ ಆನೆ ಬಸವಳಿದಂತೆ ಕಂಡುಬಂದಿತು. ಶಾಪಿಂಗ್ ಮಾಲ್‌ನ ನೆಲಮಾಳಿಗೆಯತ್ತ ನಡೆದು ಸುಸ್ತಾಗಿ ನಿಂತಿತು. ಎರಡು ಕ್ರೇನ್‌ಗಳ ಸಹಾಯದಿಂದ 12 ಚಕ್ರದ ಟ್ರಕ್‌ಗೆ ಹತ್ತಿಸಲಾಯಿತು. ನಂತರ ಸುಖ್ನಾ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡಲಾಯಿತು ಎಂದು ಅರಣ್ಯ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.