ADVERTISEMENT

ಪಶ್ಚಿಮ ಬಂಗಾಳ: 244 ಕೋಟ್ಯಧಿಪತಿಗಳು ಕಣಕ್ಕೆ

​ಪ್ರಜಾವಾಣಿ ವಾರ್ತೆ
Published 3 ಮೇ 2016, 19:30 IST
Last Updated 3 ಮೇ 2016, 19:30 IST

ಕೋಲ್ಕತ್ತ (ಪಿಟಿಐ): ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ 1,961 ಅಭ್ಯರ್ಥಿಗಳಲ್ಲಿ 244 ಮಂದಿ ಕೋಟ್ಯಧಿಪತಿಗಳಾಗಿದ್ದಾರೆ.

ಇವರಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದವರೇ ಹೆಚ್ಚಾಗಿದ್ದಾರೆ. ಈ ಪಕ್ಷದ  114 ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆ ಬಗ್ಗೆ ನಿಗಾವಹಿಸಿರುವ ಸಂಸ್ಥೆ ಮತ್ತು ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್‌ (ಎಡಿಆರ್) ಜಂಟಿಯಾಗಿ ನಡೆಸಿರುವ ಸಮೀಕ್ಷೆಯಲ್ಲಿ ಈ ವಿಷಯ ತಿಳಿದು ಬಂದಿದೆ.

ಬಿಜೆಪಿ ಎರಡನೇ ಸ್ಥಾನದಲ್ಲಿದ್ದು, 46 ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ. ಕಾಂಗ್ರೆಸ್‌ನ 31, ಪಕ್ಷೇತರರು 19, ಸಿಪಿಐಎಂನ 13, ಹಾಗೂ ಬಿಎಸ್‌ಪಿಯ  ನಾಲ್ವರು ಕೋಟ್ಯಧಿಪತಿಗಳಾಗಿದ್ದಾರೆ.

1,961 ಅಭ್ಯರ್ಥಿಗಳಲ್ಲಿ 81 ಅಭ್ಯರ್ಥಿಗಳು ಹಾಲಿ ಶಾಸಕರಾಗಿದ್ದು, ಈಗ ಮತ್ತೊಮ್ಮೆ ಸ್ಪರ್ಧಿಸಿದ್ದಾರೆ.

ಶಾಸಕರ ಆಸ್ತಿಯಲ್ಲಿ ಶೇಕಡ 112ರಷ್ಟು ಹೆಚ್ಚಳವಾಗಿದೆ. 2011ರಲ್ಲಿ 245 ಶಾಸಕರ ಸರಾಸರಿ ಆಸ್ತಿ ₹60.11 ಲಕ್ಷ ಇತ್ತು. ಆದರೆ, 2016ರಲ್ಲಿ ₹1.27 ಕೋಟಿಗೆ ತಲುಪಿದೆ ಎಂದು ವಿಶ್ಲೇಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.