ADVERTISEMENT

ಬನ್ನಂಜೆ ರಾಜ, ಸಹಚರರ ₹ 50 ಕೋಟಿ ಆಸ್ತಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2016, 19:30 IST
Last Updated 1 ಜುಲೈ 2016, 19:30 IST

ನವದೆಹಲಿ(ಪಿಟಿಐ):  ಭೂಗತಪಾತಕಿ ಬನ್ನಂಜೆ ರಾಜ ಮತ್ತು ಆತನ   ಸಹಚರರಿಗೆ ಸೇರಿದ್ದ ₹50 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ಶುಕ್ರವಾರ ವಶಕ್ಕೆ ಪಡೆದಿದೆ.

ಇವರ ವಿರುದ್ಧ  ಗಡೀಪಾರಿನಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಮತ್ತು ಹವಾಲ ಹಣ ವ್ಯವಹಾರ ಮಾಡಿದ ಕುರಿತು ಇ.ಡಿ. ತನಿಖೆ ನಡೆಸುತ್ತಿದೆ.
ಬನ್ನಂಜೆ ರಾಜ, ಆತನ ಸಹಚರರಾದ ಅಮೀನ್‌ ಬಾಷಾ ಮತ್ತು ಇತರರ ವಿರುದ್ಧ ಕರ್ನಾಟಕ ಪೊಲೀಸರು ಕ್ರಿಮಿನಲ್‌  ಪ್ರಕರಣವನ್ನು ದಾಖಲಿಸಿದ್ದಾರೆ. ಜೀವಬೆದರಿಕೆ, ಗಡೀಪಾರು, ಕೊಲೆ ಮತ್ತು ಹವಾಲ ಮೂಲಕ ಹಣ ಪೂರೈಕೆ ಸೇರಿದಂತೆ ಹಲವು ಕಾನೂನುಬಾಹಿರ ಚಟುವಟಿಕೆ ನಡೆಸಿದ ಆರೋಪದ ಮೇಲೆ  ಆರೋಪಪಟ್ಟಿ ದಾಖಲಿಸಿದ್ದಾರೆ.

ಅಕ್ರಮ ಚಟುವಟಿಕೆಗಳ ಮೂಲಕ ಗಳಿಸಿದ ಆದಾಯವನ್ನು ದುಬೈನಲ್ಲಿ ಗಳಿಸಿದ ಹಣ ಎಂದು ಈ ಆರೋಪಿಗಳು  ಬಿಂಬಿಸುತ್ತಿದ್ದರು ಎಂದು ಇ.ಡಿ. ನಡೆಸಿದ ತನಿಖೆಯಿಂದ ತಿಳಿದುಬಂದಿದೆ.  ಇದಲ್ಲದೆ ಹಲವು ಆಸ್ತಿಯನ್ನು ಇವರು ಮ್ಯಾನೇಜರ್‌, ಲಾರೆನ್ಸ್‌್ ಪೌಲ್‌ ಮತ್ತು ಇವರ ಪತ್ನಿ ಹಾಗೂ ಸಹೋದರರ ಹೆಸರಿನಲ್ಲಿ ಪಡೆದಿದ್ದಾಗಿ ದಾಖಲೆಗಳನ್ನು ತೋರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.