ADVERTISEMENT

ಬಳಸದ 43 ವಿಮಾನ ನಿಲ್ದಾಣ ಬಳಕೆಗೆ ನಿರ್ಧಾರ

ಪಿಟಿಐ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಬಳಸದ 43 ವಿಮಾನ ನಿಲ್ದಾಣ ಬಳಕೆಗೆ ನಿರ್ಧಾರ
ಬಳಸದ 43 ವಿಮಾನ ನಿಲ್ದಾಣ ಬಳಕೆಗೆ ನಿರ್ಧಾರ   

ಪಣಜಿ : ಪ್ರಾದೇಶಿಕ ಸಂಪರ್ಕ ಜಾಲವನ್ನು ಬಲಪಡಿಸುವ ಉದ್ದೇಶದಿಂದ ಇದುವರೆಗೆ ಬಳಸದೇ ಇರುವ ದೇಶದ 43 ವಿಮಾನ ನಿಲ್ದಾಣಗಳನ್ನು ಬಳಸಲು ನಾಗರಿಕ ವಿಮಾನಯಾನ ಸಚಿವಾಲಯ ನಿರ್ಧರಿಸಿದೆ.

ಒಂದು ವರ್ಷದಲ್ಲಿ ಈ ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುವಂತೆ ಮಾಡಲಾಗುವುದು. ಈಗಾಗಲೇ 11 ಉದ್ಯಮಿಗಳು ಈ ವಿಮಾನ ನಿಲ್ದಾಣಗಳ ನಿರ್ವಹಣೆಗೆ ಟೆಂಡರ್ ಸಲ್ಲಿಸಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಆರ್‌. ಎನ್. ಚೌಬೆ ಸುದ್ದಿಗಾರರಿಗೆ ತಿಳಿಸಿದರು.

ದೇಶದಲ್ಲಿ ಈಗ 72 ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿದ್ದು,  ಬಳಸದಿರುವ 43 ವಿಮಾನ ನಿಲ್ದಾಣಗಳು ಕಾರ್ಯಾರಂಭ ಮಾಡಿದರೆ ದೇಶದ ವಿಮಾನಯಾನ ಚಿತ್ರಣವೇ ಬದಲಾಗಲಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.