ADVERTISEMENT

ಬಿಜೆಪಿ ಅಜೆಂಡಾ ಕಾಂಗ್ರೆಸ್ ನಕಲು - ಆಜಾದ್

​ಪ್ರಜಾವಾಣಿ ವಾರ್ತೆ
Published 10 ಜೂನ್ 2014, 9:57 IST
Last Updated 10 ಜೂನ್ 2014, 9:57 IST

ನವದೆಹಲಿ (ಐಎಎನ್‌ಎಸ್): ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಸೋಮವಾರ ರಾಷ್ಟ್ರಪತಿಗಳು ಮಾಡಿದ ಭಾಷಣದಲ್ಲಿರುವ ಬಿಜೆಪಿ ಕಾರ್ಯಸೂಚಿಗಳು ತನ್ನ ಯೋಜನೆಗಳ ನಕಲು ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.

ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ  ಭಾಷಣದಲ್ಲಿ ಕೇಳಿಬಂದ ಬಹುತೇಕ ಯೋಜನೆಗಳು ಕಾಂಗ್ರೆಸ್ ನೇತೃತ್ವದ  ಯುಪಿಎ ಸರ್ಕಾರದ ಅವಧಿಯಲ್ಲಿ ಆರಂಭಿಸಿದವುಗಳಾಗಿವೆ ಎಂದು ತಿಳಿಸಿದರು.

`ಭಾಷಣವು ದಾಖಲೆಗಳ ನಕಲಿನಂತಿದ್ದು, ಆದರೆ ಕೆಲವೆಡೆ ದಾಖಲೆಗಳ ಭಾಷೆಯನ್ನು ಇಂಗ್ಲಿಷ್ ಭಾಷಾಪ್ರಭುತ್ವದಿಂದ ತಿರುಚಿದ್ದನ್ನು ನೀವು ಕೇಳಿರಬಹುದು. ಈ ಭಾಷಣದಲ್ಲಿ ಉಲ್ಲೇಖಿಸಿರುವ ಶೇ.90ರಷ್ಟು ಯೋಜನೆಗಳನ್ನು ನಮ್ಮ ಸರ್ಕಾರ ಈಗಾಗಲೇ ಜಾರಿಗೆ ತಂದಿದೆ' ಎಂದು ಆಜಾದ್ ರಾಜ್ಯಸಭೆಯಲ್ಲಿ ಹೇಳಿದರು.

ಇದೇ ವೇಳೆ ಆಜಾದ್ ಅವರು 'ರಚನಾತ್ಮಕ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಲು ಕಾಂಗ್ರೆಸ್ ಸಿದ್ಧವಾಗಿದೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT