ADVERTISEMENT

ಭೀಮಸೇನ ಆಸ್ತಿ ವಿವಾದ: 11ಕ್ಕೆ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2014, 19:30 IST
Last Updated 22 ಜುಲೈ 2014, 19:30 IST

ಮುಂಬೈ (ಪಿಟಿಐ): ಹಿಂದೂಸ್ತಾನಿ ಗಾಯಕ ಪಂಡಿತ್‌್ ದಿವಂಗತ ಭೀಮಸೇನ ಜೋಷಿ ಅವರ ಆಸ್ತಿ ವಿವಾದ ಪ್ರಕರಣದ ವಿಚಾರಣೆಯನ್ನು ಬಾಂಬೆ ಹೈಕೋರ್ಟ್‌ ಆಗಸ್ಟ್‌ 11ಕ್ಕೆ ನಿಗದಿ ಮಾಡಿದೆ. ಜೋಷಿ ಬರೆದ ಉಯಿಲು ವಿಚಾರವಾಗಿ ಅವರ ಮೊದಲ ಪತ್ನಿ ಸುನಂದಾ ಅವರ ಮಗ ರಾಘವೇಂದ್ರ ಪುಣೆ ಸಿವಿಲ್‌ ಕೋರ್ಟ್‌ ಮೊರೆ ಹೋಗಿದ್ದರು. ಆನಂತರ ಈ ಪ್ರಕರಣ ಹೈಕೋರ್ಟ್‌ ಮೆಟ್ಟಿಲು ಏರಿತ್ತು.

ರಾಘವೇಂದ್ರ ಮನವಿ ವಿಚಾರಣೆ ನಡೆಸಿದ ಕೋರ್ಟ್‌, ಜೋಷಿ ಎರಡನೆ ಪತ್ನಿ ವತ್ಸಲಾ ಹಾಗೂ ಅವರ ಮಕ್ಕಳು ಪುಣೆಯಲ್ಲಿರುವ ಬಂಗಲೆಯನ್ನು ಮಾರಾಟ ಮಾಡು­ವು­ದಾಗಲೀ, ಬಾಡಿಗೆ ಕೊಡುವುದಾಗಲೀ ಮಾಡಕೂಡದು ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.