ADVERTISEMENT

ಭೂಸ್ವಾಧೀನ ಮಸೂದೆ ತಿದ್ದುಪಡಿಗೆ ಸಿದ್ಧ: ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2015, 10:22 IST
Last Updated 27 ಫೆಬ್ರುವರಿ 2015, 10:22 IST

ನವದೆಹಲಿ: ವಿವಾದಿತ ಭೂಸ್ವಾಧೀನ ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಬಿಗಿಪಟ್ಟು ಸಡಿಲಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇದರಲ್ಲಿ ರೈತ ವಿರೋಧಿಯಾಗಿ ಏನಾದರೂ ಇದ್ದರೆ ಖಂಡಿತ ತಿದ್ದುಪಡಿಗೆ ಸಿದ್ಧ ಎಂದು ಹೇಳಿದ್ದಾರೆ.

ಶುಕ್ರವಾರ ಲೋಕಸಭೆಯಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು,   ಭೂಸ್ವಾಧೀನ ತಿದ್ದುಪಡಿ ಮಸೂದೆಯನ್ನು ಪ್ರತಿಪಕ್ಷಗಳು ‘ಪ್ರತಿಷ್ಠೆ’ಯ ವಿಷಯವಾಗಿ ಪರಿಗಣಿಸಬಾರದು. ಇದರಲ್ಲಿ ರೈತ ವಿರೋಧಿಯಾಗಿ ಏನೂ ಇಲ್ಲ. ಮಸೂದೆ ಮಂಡನೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

‘ನರೇಗಾ’ದಿಂದ ಕ್ರಾಂಗ್ರೆಸ್‌ ಸೋಲು
ಕಾಂಗ್ರೆಸ್‌ ಸೋಲಿಗೆ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ  (ನರೇಗಾ) ಕಾರಣ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

‘ನರೇಗಾ’ ಮುಂದುವರಿಯಲಿದೆ. ಇದು ಕಾಂಗ್ರೆಸ್‌ ಪತನಕ್ಕೆ ಜೀವಂತ ಉದಾಹರಣೆ ಎಂದ ಅವರು, ತಮ್ಮ ಸರ್ಕಾರವು ಹಿಂದಿನ ಸರ್ಕಾರಗಳು ಜಾರಿಗೆ ತಂದ ಇಂತಹ ‘ಹಳೆಯ’ ಯೋಜನೆಗಳನ್ನು  ಇತ್ಯರ್ಥಪಡಿಸುವುದಕ್ಕೇ ಸಾಕಷ್ಟು ಸಮ್ಯ ವ್ಯಯಿಸುತ್ತಿದೆ ಎಂದರು.

ಹಳೆಯ ಸರ್ಕಾರಗಳ ಹಳೆಯ ಯೋಜನೆಗಳನ್ನು ಮೋದಿ ಸರ್ಕಾರ ಹೊಸ ಹೆಸರಿನೊಂದಿಗೆ ಜನರ ಮುಂದಿಡುತ್ತಿದೆಯಲ್ಲ ಎಂಬ ಟೀಕೆಗೆ ಉತ್ತರಿಸಿದ ಅವರು, ಸಮಸ್ಯೆ ಇರುವುದು ಯೋಜನೆಗಳ  ಹೆಸರಿನಲ್ಲಿ ಅಲ್ಲ, ಅಭಿವೃದ್ಧಿ ವಿಚಾರದಲ್ಲಿ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT