ADVERTISEMENT

ಮತ್ತೆ ಸಂಪುಟ ಸೇರಿದ ಗಾಯತ್ರಿ

ಪಿಟಿಐ
Published 26 ಸೆಪ್ಟೆಂಬರ್ 2016, 18:31 IST
Last Updated 26 ಸೆಪ್ಟೆಂಬರ್ 2016, 18:31 IST
ಉತ್ತರಪ್ರದೇಶದಲ್ಲಿ ಮತ್ತೆ ಅಖಿಲೇಶ್‌ ಸಂಪುಟ ಸೇರಿದ ಗಾಯತ್ರಿ ಪ್ರಜಾಪತಿ ಅವರು ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಅವರ ಕಾಲಿಗೆರಗಿದ ಪರಿ  ಪಿಟಿಐ ಚಿತ್ರ
ಉತ್ತರಪ್ರದೇಶದಲ್ಲಿ ಮತ್ತೆ ಅಖಿಲೇಶ್‌ ಸಂಪುಟ ಸೇರಿದ ಗಾಯತ್ರಿ ಪ್ರಜಾಪತಿ ಅವರು ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್‌ ಅವರ ಕಾಲಿಗೆರಗಿದ ಪರಿ ಪಿಟಿಐ ಚಿತ್ರ   

ಲಖನೌ: ಭ್ರಷ್ಟಾಚಾರದ ಕಳಂಕ ಹೊತ್ತು ಉತ್ತರ ಪ್ರದೇಶ ಸಂಪುಟದಿಂದ ವಜಾಗೊಂಡಿದ್ದ ಗಾಯತ್ರಿ ಪ್ರಜಾಪತಿ ಅವರನ್ನು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸೋಮವಾರ ಸಂಪುಟಕ್ಕೆ ಮತ್ತೆ ಸೇರಿಸಿಕೊಂಡಿದ್ದಾರೆ.

ಗಾಯತ್ರಿ ಅವರ ಜೊತೆ ಮನೋಜ್ ಪಾಂಡೆ, ಶಿವಕಾಂತ್ ಓಝಾ ಮತ್ತು ಜಿಯಾವುದ್ದೀನ್ ರಿಜ್ವಿ ಸಂಪುಟ ಸೇರಿದ್ದಾರೆ. 2017ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಅಖಿಲೇಶ್ ಅವರು ನಡೆಸಿರುವ ಕಡೆಯ ಸಂಪುಟ ವಿಸ್ತರಣೆ ಇದು ಎನ್ನಲಾಗಿದೆ.

ಗಾಯತ್ರಿ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬಾರದು ಎಂದು ಸಾಮಾಜಿಕ ಕಾರ್ಯಕರ್ತರೊಬ್ಬರು ರಾಜ್ಯಪಾಲ ರಾಮ್ ನಾಯ್ಕ್ ಅವರಿಗೆ ಈಚೆಗೆ ಮನವಿ ಸಲ್ಲಿಸಿದ್ದರು. ಸಚಿವರಾಗಿ ಸಂಪುಟ ಸೇರಿದವರಿಗೆ ರಾಜ್ಯಪಾಲರು ಪ್ರಮಾಣ ವಚನ ಬೋಧಿಸಿದರು.ಗಾಯತ್ರಿ ಅವರ ಜೊತೆ ರಾಜ್‌ ಕಿಶೋರ್ ಸಿಂಗ್ ಅವರನ್ನೂ ಸಂಪುಟ ದಿಂದ ಕೈಬಿಡಲಾಗಿತ್ತು. ಆದರೆ ಇವರನ್ನು ಸೋಮವಾರ ಸಂಪುಟಕ್ಕೆ ಸೇರಿಸಿಕೊಂಡಿಲ್ಲ.

ಗಾಯತ್ರಿ ಅವರನ್ನು ಸಂಪುಟಕ್ಕೆ ಪುನಃ ಸೇರಿಸಿಕೊಂಡಿರುವುದು ಅಖಿಲೇಶ್ ಅವರಲ್ಲಿನ ದೌರ್ಬಲ್ಯವನ್ನು ತೋರಿಸುತ್ತದೆ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.