ADVERTISEMENT

ಮಲೇಷ್ಯಾ ವಿಮಾನ ತುರ್ತು ಭೂ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2015, 11:08 IST
Last Updated 3 ಸೆಪ್ಟೆಂಬರ್ 2015, 11:08 IST

ಚೆನ್ನೈ(ಪಿಟಿಐ): ತಾಂತ್ರಿಕ ತೊಂದರೆಯ ಕಾರಣದಿಂದಾಗಿ ಮಲೇಷ್ಯಾ ಏರ್ ಲೈನ್ಸ್ ವಿಮಾನ ಚೆನ್ನೈನ ವಿಮಾನ ನಿಲ್ದಾಣದಲ್ಲಿ ಗುರುವಾರ ತುರ್ತು ಭೂ ಸ್ಪರ್ಶ ಮಾಡಿದೆ.

230 ಪ್ರಯಾಣಿಕರಿದ್ದ ಮಲೇಷ್ಯಾ ಏರ್ ಲೈನ್ಸ್ ವಿಮಾನ ಆಮ್‌ಸ್ಟರ್‌ಡಾಮ್‌ನಿಂದ ಕ್ವಾಲಾಲಂಪುರಕ್ಕೆ ತೆರಳುತ್ತಿದ್ದ ವಿಮಾನ ಬೆಳಿಗ್ಗೆ ತಾಂತ್ರಿಕ ತೊಂದರೆಯಿಂದಾಗಿ ತುರ್ತು ಭೂ ಸ್ಪರ್ಶ ಮಾಡಿತು. ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಂತ್ರಿಕ ದೋಷವನ್ನು ಸರಿಪಡಿಸಿದ ಬಳಿಕ ವಿಮಾನ ಪ್ರಯಾಣ ಮುಂದುವರೆಸಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

2014ರಲ್ಲಿ ಮಲೇಷ್ಯಾದ ‘ಎಂಎಚ್’ 370 ವಿಮಾನ ಕ್ವಾಲಾಲಂಪುರದಿಂದ ಬೀಜಿಂಗ್ ಗೆ ತೆರಳುತ್ತಿದ್ದಾಗ ನಿಗೂಢವಾಗಿ ನಾಪತ್ತೆಯಾಗಿತ್ತು. ಈ ದುರ್ಘಟನೆಯಲ್ಲಿ 239 ಜನ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.