ADVERTISEMENT

ಮಹಿಳೆಯರೇ ಎಚ್ಚರ: ಇದ್ದಾರೆ ‘ಫೋನ್‌ ರೋಮಿಯೋ’ಗಳು!

ಅನಾಮಿಕ ಕರೆಗಳ ಮೂಲಕ ಪ್ರೇಮ ನಿವೇದನೆ

ಏಜೆನ್ಸೀಸ್
Published 24 ಮಾರ್ಚ್ 2017, 13:55 IST
Last Updated 24 ಮಾರ್ಚ್ 2017, 13:55 IST
ಮಹಿಳೆಯರೇ ಎಚ್ಚರ: ಇದ್ದಾರೆ ‘ಫೋನ್‌ ರೋಮಿಯೋ’ಗಳು!
ಮಹಿಳೆಯರೇ ಎಚ್ಚರ: ಇದ್ದಾರೆ ‘ಫೋನ್‌ ರೋಮಿಯೋ’ಗಳು!   

ನವದೆಹಲಿ: ಮಹಿಳೆಯ ಧ್ವನಿ ಕೇಳುವವರೆಗೂ ಸಿಕ್ಕ ಸಿಕ್ಕ ಸಂಖ್ಯೆಗಳಿಗೆ ಕರೆ ಮಾಡುವವರನ್ನು ಪೊಲೀಸ್‌ ಸಹಾಯವಾಣಿ ಸಿಬ್ಬಂದಿಗಳು ‘ಫೋನ್‌ ರೋಮಿಯೋ’ಗಳು ಎಂದು ಕರೆದಿದ್ದಾರೆ.

ಫೋನ್‌ ಮೂಲಕವೇ ಸಂಗಾತಿಯನ್ನು ಹುಡುಕುವ ಪ್ರಯ್ನತದಲ್ಲಿ ಮನಸ್ಸಿಗೆ ತೋಚುವ ಸಂಖ್ಯೆ ಒತ್ತಿ ಹೆಣ್ಣಿನ ಧ್ವನಿಗಾಗಿ ಕಾಯುವ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ವರದಿಯಾಗಿದೆ.

ಕರೆ ಮಾಡುವ ಯುವಕರಿಗೆ ಹೆಣ್ಣಿನ ಧ್ವನಿ ಕೇಳಿದ ಕೂಡಲೇ ಮಧುರವಾಗಿ ಮಾತನಾಡುತ್ತ ಪ್ರೇಮಪಾಶದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಾರೆ.

ADVERTISEMENT

‘ಮೇಡಮ್‌, ನಾನು ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ಆದರೆ ನನ್ನ ದೇಹ ಕಂಪಿಸುತ್ತಿದೆ’, ‘ನಾನು ನಿಮ್ಮೊಂದಿಗೆ ಅಕ್ರಮವಾದುದನ್ನು ಮಾಡಬೇಕೆಂದಿರುವೆ..’ ಹೀಗೆ ಅನೇಕ ರೀತಿಯಲ್ಲಿ ಮಾತನಾಡಿ ಮಹಿಳೆಯರನ್ನು ಓಲೈಸುವ ಕಾರ್ಯ ನಡೆಯುತ್ತಿದೆ.

ದೇಶದಲ್ಲಿ ಕರೆ ದರ ಕಡಿಮೆ ಇರುವ ಕಾರಣದಿಂದ ಮೊಬೈಲ್‌ ಮೂಲಕ ಅನಾಮಿಕ ಕರೆಗಳ ಸಂಖ್ಯೆ ಹೆಚ್ಚಿದ್ದು, ಈ ಪ್ರಯತ್ನದಲ್ಲಿ ಅನೇಕ ಫೋನ್‌ ರೋಮಿಯೋಗಳು ಮಹಿಳೆಯರನ್ನು ಪುಸಲಾಯಿಸಿದ್ದಾರೆ ಎಂದು ದಿ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ಅನಾಮಿಕ ಕರೆಗಳ ಕುರಿತು ಅನೇಕರು ದೂರು ನೀಡಿದ್ದು, ಈ ಸಂಬಂಧ ಲಖನೌ ಪೊಲೀಸ್‌ ಕಾಲ್‌ ಸೆಂಟರ್‌ 700 ಕರೆಗಳನ್ನು ಸ್ವೀಕರಿಸಿದೆ.

ಮೊಬೈಲ್‌ ರೀಚಾರ್ಜ್‌ ಮಾಡುವ ಅಂಗಡಿಗಳು ಫೋನ್‌ ರೋಮಿಯೋಗಳಿಗೆ ಮಹಿಳೆಯ ಮೊಬೈಲ್‌ ಸಂಖ್ಯೆಗಳನ್ನು ಹಣ ಪಡೆದು ನೀಡುತ್ತಿರುವ ಕುರಿತು ವರದಿಯಾಗಿದೆ. ಸುಂದರವಾಗಿರುವ ಮಹಿಳೆಯರ ಮೊಬೈಲ್‌ ಸಂಖ್ಯೆ ನೀಡಲು ₹500 ಹಾಗೂ ಸಾಮಾನ್ಯ ಮಹಿಳೆಯರ ಮೊಬೈಲ್‌ ಸಂಖ್ಯೆಗೆ ₹50 ಪಡೆಯುತ್ತಿದ್ದಾರೆ.

ತಪ್ಪಾಗಿ ಮಾಡುವ ಕರೆಗಳು ಹಾಗೂ ಬೇಕೆಂದೆ ಮಾಡುವ ಅನಾಮಿಕ ಕರೆಗಳ ಬಗ್ಗೆ ಮಹಿಳೆಯರು ಎಚ್ಚರವಹಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.