ADVERTISEMENT

ಮಾವೋವಾದಿ– ಸಿಆರ್‌ಪಿಎಫ್‌ ಗುಂಡಿನ ಕಾಳಗ: ಅಧಿಕಾರಿ ಹುತಾತ್ಮ

ಏಜೆನ್ಸೀಸ್
Published 21 ಏಪ್ರಿಲ್ 2018, 7:55 IST
Last Updated 21 ಏಪ್ರಿಲ್ 2018, 7:55 IST
ಮಾವೋವಾದಿ– ಸಿಆರ್‌ಪಿಎಫ್‌ ಗುಂಡಿನ ಕಾಳಗ: ಅಧಿಕಾರಿ ಹುತಾತ್ಮ
ಮಾವೋವಾದಿ– ಸಿಆರ್‌ಪಿಎಫ್‌ ಗುಂಡಿನ ಕಾಳಗ: ಅಧಿಕಾರಿ ಹುತಾತ್ಮ   

ರಾಯ್‌ಪುರ: ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಮಾವೋವಾದಿಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಹಾಗೂ ಕೇಂದ್ರೀಯ ಮೀಸಲು ಪೊಲೀಸ್‌ ಪಡೆಯ(ಸಿಆರ್‌ಪಿಎಫ್‌) ಅಧಿಕಾರಿಯೊಬ್ಬರು ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ರಾತ್ರಿ ಕಿಸ್ತರಾಮ್‌ ಠಾಣಾ ವ್ಯಾಪ್ತಿಯಲ್ಲಿ ಸಿಆರ್‌ಪಿಎಫ್‌ನ 212ನೇ ಬೆಟಾಲಿಯನ್‌ನ ಯೋಧರು ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಗುಂಡಿನ ಚಕಮಕಿ ನಡೆದಿದೆ ಎಂದು ಬಸ್ತರ್‌ ದಕ್ಷಿಣ ವಲಯದ ಡಿಐಜಿ ಸುಂದರ್‌ ರಾಜ್‌ ಪಿ. ತಿಳಿಸಿದ್ದಾರೆ.

‘ಈ ವೇಳೆ ಮಧ್ಯಪ್ರದೇಶ ಮೂಲದವರಾದ ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌(ಎಎಸ್‌ಐ) ಅನಿಲ್‌ ಕುಮಾರ್‌ ಮೌರ್ಯ ಮೃತಪಟ್ಟಿದ್ದಾರೆ’ ಎಂದೂ ಹೇಳಿದ್ದಾರೆ.

ADVERTISEMENT

ಘಟನಾ ಸ‌್ಥಳ ರಾಜಧಾನಿ ರಾಯ್‌ಪುರದಿಂದ 500 ಕಿ.ಮೀ. ದೂರದಲ್ಲಿದ್ದು, ಸದ್ಯ ಮಾವೋವಾದಿಗಳ ವಿರುದ್ಧ ಕೂಂಬಿಂಗ್‌ ಕಾರ್ಯಾಚರಣೆ ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.