ADVERTISEMENT

ಮುಂದಿನ ವರ್ಷ ನೂತನ ಶಿಕ್ಷಣ ನೀತಿ ಜಾರಿ: ಸ್ಮೃತಿ ಇರಾನಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2015, 10:25 IST
Last Updated 30 ನವೆಂಬರ್ 2015, 10:25 IST

ನವದೆಹಲಿ(ಪಿಟಿಐ):‌ ಮುಂದಿನ ವರ್ಷ ನೂತನ ಶಿಕ್ಷಣ ನೀತಿ ಜಾರಿ ಮಾಡಲಾಗುವುದು ಎಂದು ಸರ್ಕಾರ ಸೋಮವಾರ ಲೋಕಸಭೆಯಲ್ಲಿ ತಿಳಿಸಿದೆ.

ಹೊಸ ಶಿಕ್ಷಣ ನೀತಿ ಪುನರ್ ರಚನೆ ಸಂಬಂಧ ಕೇಳಲಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವೆ ಸ್ಮೃತಿ ಇರಾನಿ ಅವರು, ಪ್ರಸ್ತಾವಿತ ನೂತನ ಶಿಕ್ಷಣ ನೀತಿ ಮುಂದಿನ ವರ್ಷ ಫಲಪ್ರದವಾಗಲಿದೆ ಎಂದು ಸದನಕ್ಕೆ ತಿಳಿಸಿದರು.

‘ಇ-ಪಾಠಶಾಲ’: ‘ಇ-ಪಾಠಶಾಲ’ ಯೋಜನೆ ಜಾರಿಯಾಗಲಿದ್ದು, ಒಂದರಿಂದ 12ನೇ ತರಗತಿ(ಪಿಯು)ವರೆಗಿನ ಸಿಬಿಎಸ್ಇ ಪಠ್ಯಕ್ರಮದ ಪುಸ್ತಕಗಳು ಆನ್‌ಲೈನ್ ಹಾಗೂ ಮೊಬೈಲ್ ಪೋನ್ ಅಪ್ಲಿಕೇಷನ್‌ಗಳ ಮೂಲಕ ಉಚಿತವಾಗಿ ಲಭ್ಯವಾಗಲಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.