ADVERTISEMENT

ಮೋದಿ ವಿರುದ್ಧ ಆಯೋಗಕ್ಕೆ ಕಾಂಗ್ರೆಸ್‌ ಅರ್ಜಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2014, 19:46 IST
Last Updated 22 ಏಪ್ರಿಲ್ 2014, 19:46 IST

ನವದೆಹಲಿ: ವಾರಾಣಸಿಯ ಬನಾರಸ್‌ ಹಿಂದು ವಿಶ್ವವಿದ್ಯಾಲಯದ ಆವರಣ­ದಲ್ಲಿ ಕಾಲಿಡಲು ನರೇಂದ್ರ ಮೋದಿ ಅವರಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿ ಕಾಂಗ್ರೆಸ್‌ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಿದೆ.

ಬನಾರಸ್‌ ವಿವಿಗೆ ಹೆಲಿಕಾಪ್ಟರ್‌ನಲ್ಲಿ ತೆರಳಿ ವಿವಿ ಸಂಸ್ಥಾಪಕ ಮದನ್‌ ಮೋಹನ್‌ ಮಾಳವೀಯ ಅವರ ಪ್ರತಿಮೆಗೆ ಮೋದಿ ಹಾರ ಹಾಕುವ ಕಾರ್ಯಕ್ರಮವಿದೆ. ಅದೇ ರೀತಿ ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠದ ಆವರಣದಲ್ಲಿ ಅವರು ರೋಡ್‌ ಷೋ ನಡೆಸಲಿದ್ದಾರೆ.

ಬನಾರಸ್  ವಿವಿ ಮತ್ತು ಮಹಾತ್ಮಾ ಗಾಂಧಿ ಕಾಶಿ ವಿದ್ಯಾಪೀಠಗಳು ಕ್ರಮ­ವಾಗಿ ಕೇಂದ್ರೀಯ ಹಾಗೂ ರಾಜ್ಯ ವಿಶ್ವ­ವಿದ್ಯಾಲಯಗಳು. ಹಾಗಾಗಿ, ರಾಜ­ಕೀಯ ಉದ್ದೇಶಕ್ಕಾಗಿ ಈ ವಿವಿಗಳ ಆವರಣ ಬಳಸಿಕೊಳ್ಳುವಂತಿಲ್ಲ ಎಂದು ಕಾಂಗ್ರೆಸ್‌ ಅರ್ಜಿಯಲ್ಲಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.