ADVERTISEMENT

ಮೌನವೇಕೆ: ಮೋದಿ, ಸ್ಮೃತಿಗೆ ಶತ್ರುಘ್ನ ಸಿನ್ಹಾ ಪ್ರಶ್ನೆ

ಪಿಟಿಐ
Published 22 ನವೆಂಬರ್ 2017, 19:30 IST
Last Updated 22 ನವೆಂಬರ್ 2017, 19:30 IST
ಶತ್ರುಘ್ನ ಸಿನ್ಹಾ
ಶತ್ರುಘ್ನ ಸಿನ್ಹಾ   

ನವದೆಹಲಿ: ಪದ್ಮಾವತಿ ಚಿತ್ರದ ವಿಚಾರವಾಗಿ ದೇಶದಾದ್ಯಂತ ಪರ–ವಿರೋಧ ಚರ್ಚೆಗಳು ನಡೆಯುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವೆ ಸ್ಮೃತಿ ಇರಾನಿ ಹಾಗೂ ಬಾಲಿವುಡ್‌ನ ಖ್ಯಾತ ನಟರು ಯಾಕೆ ಮೌನವಾಗಿದ್ದಾರೆ ಎಂದು ಬಿಜೆಪಿ ಮುಖಂಡ ಶತ್ರುಘ್ನ ಸಿನ್ಹಾ ಪ್ರಶ್ನಿಸಿದ್ದಾರೆ.

‘ನಮ್ಮ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರು ಅಥವಾ ನಮ್ಮ  ಅತ್ಯಂತ ಜನಪ್ರಿಯ ಪ್ರಧಾನಿ ಅವರು ಈ ವಿಚಾರದಲ್ಲಿ ಇನ್ನೂ ಯಾಕೆ ಮೌನದಿಂದ ಇದ್ದಾರೆ’ ಎಂದು ಪ್ಯೂ ಅಧ್ಯಯನ ವರದಿಯನ್ನು ಉಲ್ಲೇಖಿಸಿ ಅವರು ಟ್ವೀಟ್‌ ಮಾಡಿದ್ದಾರೆ.

‘ಪದ್ಮಾವತಿ ಚಿತ್ರ ದೊಡ್ಡ ವಿವಾದವಾಗಿ ಮಾರ್ಪಟ್ಟಿರುವಾಗ ಬಾಲಿವುಡ್ ದಂತಕಥೆ ಅಮಿತಾಭ್‌ ಬಚ್ಚನ್‌, ಬಹುಮುಖ ತಾರೆ ಅಮೀರ್‌ ಖಾನ್‌ ಮತ್ತು ಅತ್ಯಂತ ಜನಪ್ರಿಯ ನಟ ಶಾರುಕ್‌ ಖಾನ್‌ ಯಾಕೆ ಏನೂ ಮಾತನಾಡುತ್ತಿಲ್ಲ ಎಂದು ಜನರು ಕೇಳುತ್ತಿದ್ದಾರೆ’ ಎಂದು ಪಟ್ನಾ ಸಾಹೀಬ್‌ ಕ್ಷೇತ್ರದ ಸಂಸದರೂ ಆಗಿರುವ ಸಿನ್ಹಾ ಹೇಳಿದ್ದಾರೆ. ಶತ್ರುಘ್ನ ಅವರು ನೋಟು ರದ್ದತಿ ಸೇರಿದಂತೆ ಸರ್ಕಾರದ ಕೆಲವು ನಿರ್ಧಾರಗಳ ವಿರುದ್ಧವಾ‌ಗಿ ನಿಲುವು ತಳೆದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.