ADVERTISEMENT

ಮ್ಯಾಗಿ ರಫ್ತಿಗೆ ಬಾಂಬೆ ಹೈಕೋರ್ಟ್‌ ಅನುಮತಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 10:20 IST
Last Updated 30 ಜೂನ್ 2015, 10:20 IST

ಮುಂಬೈ (ಪಿಟಿಐ): ಭಾರತದಲ್ಲಿ ನಿಷೇಧಕ್ಕೆ ಒಳಗಾಗಿರುವ ಮ್ಯಾಗಿ ನೂಡಲ್ಸ್‌ ರಫ್ತು ಮಾಡಲು ನೆಸ್ಲೆ ಇಂಡಿಯಾ ಕಂಪೆನಿಗೆ ಬಾಂಬೆ ಹೈಕೋರ್ಟ್‌ ಮಂಗಳವಾರ ಅನುಮತಿ ನೀಡಿದೆ.‌

ರಾಷ್ಟ್ರೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ನೂಡಲ್ಸ್‌ ರಫ್ತಿಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ ಈ ನಿರ್ಧಾರ ಹೊರ ಬಿದ್ದಿದೆ.

ಆರೋಗ್ಯಕ್ಕೆ ಮಾರಕ ಎಂಬ ಕಾರಣಕ್ಕಾಗಿ ದೇಶದಲ್ಲಿ ಒಂಬತ್ತು ಬಗೆಯ ಮ್ಯಾಗಿ ನೂಡಲ್ಸ್‌ ಮಾರಾಟದ ಮೇಲೆ ಎಫ್‌ಎಸ್‌ಎಸ್‌ಎಐ ನಿಷೇಧ ಹೇರಿದೆ. ಮಹಾರಾಷ್ಟ್ರ ಸರ್ಕಾರವೂ ಕೂಡ ಇಂಥದ್ದೆ ನಿರ್ಬಂಧ ವಿಧಿಸಿದೆ.

ADVERTISEMENT

ನಿಷೇಧ ಇದನ್ನು ಪ್ರಶ್ನಿಸಿ ನೆಸ್ಲೆ ಇಂಡಿಯಾ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ವಿ.ಎಂ.ಕಾನಡೆ ಹಾಗೂ ಬಿ.ಪಿ.ಕೊಲಾಬಾವಾಲಾ ಅವರಿದ್ದ ಪೀಠ ನಡೆಸಿತು.

ಈ ವೇಳೆ, ‘ನಮ್ಮನ್ನು ಏಕೆ ದೂಷಿಸುತ್ತೀರಿ. ತನ್ನ ಉತ್ಪನ್ನ ಸುರಕ್ಷಿತವಾಗಿದ್ದು, ಸುರಕ್ಷಾ ಮಾನದಂಡ ಪಾಲಿಸಲಾಗುತ್ತಿದೆ
ಎಂದು ಕಂಪೆನಿ ಹೇಳಿಕೊಂಡರೆ, ನಾಶ ಮಾಡುವ ಬದಲು ರಫ್ತು ಮಾಡಲು ಬಿಡಿ’ ಎಂದು ಎಫ್‌ಎಸ್‌ಎಸ್‌ಎಐ ಪರ ವಕೀಲ ಮಹಮೂದ್‌ ಪ್ರಚಾ ಅವರು ವಾದಿಸಿದರು.

ಬಳಿಕ ಹೈಕೋರ್ಟ್‌ ನೆಸ್ಲೆ ಇಂಡಿಯಾಗೆ ಮ್ಯಾಗಿ ರಫ್ತಿಗೆ ಅನುಮತಿ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.