ADVERTISEMENT

ಯೋಗದಿಂದ ಹಣದುಬ್ಬರ ಕಡಿತ ಸಾಧ್ಯವೇ?: ಶಿವಸೇನಾ

​ಪ್ರಜಾವಾಣಿ ವಾರ್ತೆ
Published 23 ಜೂನ್ 2016, 19:30 IST
Last Updated 23 ಜೂನ್ 2016, 19:30 IST

ಮುಂಬೈ (ಪಿಟಿಐ): ಯೋಗಕ್ಕೆ ವಿಶ್ವ ಮಾನ್ಯತೆ ದೊರಕಿಸಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನವನ್ನು ಶ್ಲಾಘಿಸಿರುವ ಶಿವಸೇನಾ, ಈ ಪ್ರಾಚೀನ ಪದ್ಧತಿಯನ್ನು ಅನುಸರಿಸುವುದರಿಂದ ಜನರನ್ನು ಹಣದುಬ್ಬರದಿಂದ  ಪಾರು ಮಾಡಲಾಗುವುದೇ ಎಂದು ವ್ಯಂಗ್ಯ ವಾಡಿದೆ.

‘ಈಗಿನ ಅಗತ್ಯವೆಂದರೆ ಪಾಕಿಸ್ತಾನ ವನ್ನು ಮಣಿಸುವುದು. ಅದು ಕೇವಲ ಶಸ್ತ್ರಾಸ್ತ್ರಗಳಿಂದ ಮಾತ್ರ. ಪಾಕಿಸ್ತಾನವನ್ನು ಶಾಶ್ವತವಾಗಿ ‘ಶವಾಸನ’ನದಲ್ಲಿರಿಸ ಬೇಕು’ ಎಂದು ಶಿವಸೇನಾ ಮುಖವಾಣಿ ‘ಸಾಮ್ನಾ’  ಸಂಪಾದಕೀಯದಲ್ಲಿ ಹೇಳಿದೆ.

‘ಯೋಗದಿಂದ ಬಹಳಷ್ಟು ಸಾಧನೆ ಸಾಧ್ಯ. ಆದರೆ, ಹಣದುಬ್ಬರ ಅಥವಾ ಭ್ರಷ್ಟಾಚಾರದಿಂದ ಜನರನ್ನು ಮುಕ್ತಿಗೊ ಳಿಸಲು ಸಾಧ್ಯವೇ? ಈ ಕುರಿತು ಸ್ಪಷ್ಟನೆ ನೀಡಬೇಕಾಗಿದೆ’ ಎಂದು ಶಿವಸೇನೆ ಕೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.