ADVERTISEMENT

ರಕ್ಷಣಾ ಒಪ್ಪಂದಕ್ಕೆ ಸಹಿ

​ಪ್ರಜಾವಾಣಿ ವಾರ್ತೆ
Published 3 ಜೂನ್ 2015, 19:30 IST
Last Updated 3 ಜೂನ್ 2015, 19:30 IST

ನವದೆಹಲಿ (ಪಿಟಿಐ): ಭಾರತ ಮತ್ತು ಅಮೆರಿಕ ಬುಧವಾರ ೧೦ವರ್ಷಗಳ ಸೇನಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಸೇನಾ ಸಾಮಗ್ರಿಗಳ  ಜಂಟಿ ತಯಾರಿಕೆ ಹಾಗೂ ಅಭಿವೃದ್ಧಿಗೆ ವೇದಿಕೆ ಒದಗಿಸಿಕೊಟ್ಟಿದೆ.

ಭಾರತಕ್ಕೆ ಭೇಟಿ ನೀಡಿರಯವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಷ್ಟನ್‌  ಕಾರ್ಟರ್‌ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ  ಮನೋಹರ್‌ ಪರಿಕ್ಕರ್‌ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಉಭಯ ದೇಶಗಳು ಎರಡು ಒಪ್ಪಂದಗಳಿಗೆ ಸಹಿ ಹಾಕಿದವು.

ಜೈವಿಕ ಹಾಗೂ ರಾಸಾಯನಿಕ ಅಸ್ತ್ರಗಳಿಂದ ಸೈನಿಕರಿಗೆ ರಕ್ಷಣೆ ಒದಗಿಸಲು ಜಂಟಿ ಸಹಭಾಗಿತ್ವದಲ್ಲಿ ಲಘು ರಕ್ಷಾ ಕವಚ   ಅಭಿವೃದ್ಧಿಪಡಿಸಲು ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅಲ್ಲದೇ ನೌಕಾಪಡೆ ಸಿಬ್ಬಂದಿಗೆ ಸೌರವಿದ್ಯುತ್‌ ಮೂಲಕ ಬೆಳಕು ಒದಗಿಸುವ ಸಂಚಾರಿ ವಿದ್ಯುತ್‌ ಕೇಂದ್ರ ಸ್ಥಾಪಿಸಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಕಾರ್ಟರ್‌ ಅವರು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌್ ಅವರನ್ನೂ ಭೇಟಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT