ADVERTISEMENT

ಲಾಕಪ್‌ ಸಾವು: ಸಲಹೆ ಪರಿಗಣನೆ–ಸುಪ್ರೀಂ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2014, 19:30 IST
Last Updated 5 ನವೆಂಬರ್ 2014, 19:30 IST

ನವದೆಹಲಿ (ಪಿಟಿಐ): ಪೊಲೀಸ್‌ ಹಾಗೂ ಜೈಲು ಅಧಿಕಾರಿಗಳ  ವಶದಲ್ಲಿರುವ ಆರೋಪಿಗಳ ಸಾವು ಹಾಗೂ ಅವರ ಮೇಲೆ ನಡೆಯುವ ಕಿರುಕುಳ ತಪ್ಪಿಸುವುದಕ್ಕೆ ಕೋರ್ಟ್‌ ಸಹಾಯಕ ಎ.ಎಂ.ಸಿಂಘ್ವಿ ನೀಡಿರುವ ಸಲಹೆಗಳನ್ನು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್‌ ಬುಧವಾರ ತಿಳಿಸಿದೆ.

ದೇಶದಾದ್ಯಂತ ಪೊಲೀಸ್‌ ಠಾಣೆಗಳು ಮತ್ತು ಜೈಲುಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಮಾನವ ಹಕ್ಕು ಆಯೋಗದ ರಚನೆ, ಜೈಲುಗಳಿಗೆ ದಿಢೀರ್‌ ಭೇಟಿ...ಇತ್ಯಾದಿ ಸಲಹೆಗಳನ್ನು ಸಿಂಘ್ವಿ ಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.