ADVERTISEMENT

ಲೋಕಸಭೆ ಚುನಾವಣೆ: ಸೋಲು ಒಪ್ಪಿಕೊಂಡ ಸಿಪಿಎಂ

​ಪ್ರಜಾವಾಣಿ ವಾರ್ತೆ
Published 9 ಜೂನ್ 2014, 19:30 IST
Last Updated 9 ಜೂನ್ 2014, 19:30 IST

ನವದೆಹಲಿ (ಪಿಟಿಐ):  ಲೋಕಸಭೆ ಚುನಾ­­ವಣೆ ಸೋಲಿನ ಹೊಣೆಹೊತ್ತು­ಕೊಂಡ ಸಿಪಿಎಂ ಪ್ರಮುಖರು, ಸದ್ಯಕ್ಕೆ ನಾಯಕತ್ವ ಬದಲಾವಣೆಯ ಸುಳಿವು ನೀಡಿಲ್ಲ.

‘ಪಾಲಿಟ್‌ಬ್ಯುರೊ ಹಾಗೂ ಕೇಂದ್ರ ನಾಯಕತ್ವ, ಚುನಾವಣೆಯ ಸೋಲಿನ ಹೊಣೆ ಹೊತ್ತುಕೊಂಡಿದೆ’ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್‌್ ಕಾರಟ್‌್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. 

ಕಮ್ಯುನಿಸ್ಟ್‌ ಪಕ್ಷದಲ್ಲಿ ಯಾರೂ ಚುನಾವಣೆ ಫಲಿತಾಂಶದ ಕಾರಣಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಚುನಾವಣೆಯಲ್ಲಿ ಪಕ್ಷವು ಸೋಲು ಕಂಡ ಕಾರಣ ಸೀತಾರಾಂ ಯೆಚೂರಿ ಹಾಗೂ ಪಶ್ಚಿಮಬಂಗಾಳದ ಕೆಲವು ಹಿರಿಯ ಮುಖಂಡರು ಪಕ್ಷದ ಪಾಲಿಟ್‌ಬ್ಯುರೊ ಸದಸ್ಯತ್ವಕ್ಕೆ  ರಾಜೀನಾಮೆ ನೀಡಲು ಮುಂದಾ­ಗಿದ್ದರು ಎಂದು ಈ ಮೊದಲು ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.