ADVERTISEMENT

ವಾಮಾಚಾರಕ್ಕೆ 3 ವರ್ಷದ ಮಗಳನ್ನೇ ಬಲಿ ಕೊಟ್ಟ ತಂದೆ

ಏಜೆನ್ಸೀಸ್
Published 21 ಜುಲೈ 2017, 10:40 IST
Last Updated 21 ಜುಲೈ 2017, 10:40 IST
ವಾಮಾಚಾರಕ್ಕೆ 3 ವರ್ಷದ ಮಗಳನ್ನೇ ಬಲಿ ಕೊಟ್ಟ ತಂದೆ
ವಾಮಾಚಾರಕ್ಕೆ 3 ವರ್ಷದ ಮಗಳನ್ನೇ ಬಲಿ ಕೊಟ್ಟ ತಂದೆ   

ಫರಿದಾಬಾದ್‌:  ವಾಮಾಚಾರಕ್ಕಾಗಿ 3 ವರ್ಷದ ಮಗಳನ್ನೇ ಬಲಿ ಕೊಟ್ಟ ಅಪ್ಪನನ್ನು ಇಲ್ಲಿನ ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ನಿವಾಸಿ ಧೀರಜ್‌ ಕುಮಾರ್‌ ಬಂಧಿತ ಆರೋಪಿ.  ಕಳೆದ ಜುಲೈ 11 ರಂದು ನನ್ನ ಮೂರು ವರ್ಷದ ಮಗಳು ಸೋನಾಕ್ಷಿ ಕಾಣೆಯಾಗಿದ್ದಾಳೆ ಎಂದು ಆರೋಪಿ ಧೀರಜ್‌ ಸ್ಥಳೀಯ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಸೋನಾಕ್ಷಿ ಪತ್ತೆಗಾಗಿ ಸ್ಥಳೀಯ ಪೊಲೀಸರು  ತನಿಖೆ ನಡೆಸಲು ಮುಂದಾದರು. ಮೊದಲಿಗೆ ಧೀರಜ್‌ ಕುಮಾರ್‌ ನಿವಾಸದ ಸುತ್ತ ಮುತ್ತಲಿನ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದರು.

ADVERTISEMENT

ಜುಲೈ 11 ರಂದು ಸಂಜೆ ಮಗಳು ಸೋನಾಕ್ಷಿಯನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಂತರ ಅದೇ ರಸ್ತೆಯಲ್ಲಿ ವಾಪಾಸು ಬರುವಾಗ ದೀರಜ್‌ ಕುಮಾರ್‌ ಒಬ್ಬರೆ ಬಂದಿದ್ದರು.

ಅನುಮಾನಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ವಾಮಾಚಾರಕ್ಕಾಗಿ ಮಗಳನ್ನು  ನದಿಗೆ ಎಸೆದಿರುವುದಾಗಿ ಹೇಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.