ADVERTISEMENT

ವಿಶ್ವಸಂಸ್ಥೆ ಸ್ಪಷ್ಟನೆಗೆ ಭಾರತ ಒತ್ತಾಯ

ಉಗ್ರ ಸಯೀದ್‌ಗೆ ‘ಸಾಹೀಬ್‌’ ಸಂಬೋಧನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2014, 19:30 IST
Last Updated 21 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ):  ಮುಂಬೈ ಮೇಲಿನ ದಾಳಿಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಜಮಾತ್‌–ಉದ್‌–ದವಾ (ಜೆಯುಡಿ) ಸಂಘಟನೆ ಮುಖ್ಯಸ್ಥ ಹಫೀಜ್‌ ಸಯೀದ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಮಿತಿಯು ‘ಸಾಹೀಬ್‌’ ಎಂದು ಸಂಬೋಧಿಸಿರುವುದಕ್ಕೆ ಭಾರತ ಆಕ್ಷೇಪ ವ್ಯಕ್ತಪಡಿಸಿದೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ವಿಶ್ವಸಂಸ್ಥೆಯನ್ನು ಒತ್ತಾಯಿಸಿದೆ.

ವಿಶ್ವಸಂಸ್ಥೆ 2008ರಲ್ಲೇ ಜೆಯುಡಿ ಅನ್ನು ಉಗ್ರರ ಸಂಘಟನೆ ಎಂದು  ಘೋಷಿಸಿದೆ. ಸಯೀದ್‌ನನ್ನು ಘೋಷಿತ ಅಪರಾಧಿ ಎಂದು ಸಾರಿದೆ. ನಿಷೇಧಿತ ಸಂಘಟನೆಗಳಿಗೆ ಮತ್ತು ಅಪರಾಧಿ ಎಂದು ಘೋಷಿಸಿರುವ ವ್ಯಕ್ತಿಗಳಿಗೆ ಹಣಕಾಸು ಸೇರಿದಂತೆ ಯಾವುದೇ ನೆರವು ನೀಡಬಾರದು ಎಂದು ವಿಶ್ವಸಂಸ್ಥೆ ನಿರ್ಣಯದಲ್ಲಿ ಉಲ್ಲೇಖವಾಗಿದೆ. ಆದರೂ ಆತನಿಗೆ ಗೌರವ ಸೂಚಕವಾದ ‘ಸಾಹೀಬ್‌’ ಪದ ಬಳಸಿರುವುದು ಆಕ್ಷೇಪಾರ್ಹ ಎಂದು ಭಾರತ ಹೇಳಿದೆ.

ಡಿ.17ರಂದು ನಡೆದ ಭದ್ರತಾ ಮಂಡಳಿಯ ಸಮಿತಿಯೊಂದರ ಅಧ್ಯಕ್ಷತೆ ವಹಿಸಿದ್ದ ಗ್ಯಾರಿ ಕ್ಯೂಯಿಲನ್‌ ಅವರು, ನಿಷೇಧಿತ ಸಂಘಟನೆಗಳ ಬಗ್ಗೆ ಮಾಹಿತಿ ನೀಡುವಾಗ ಸಯೀದ್‌ನನ್ನು ‘ಸಾಹೀಬ್‌’ ಎಂದು ಸಂಬೋಧಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.