ADVERTISEMENT

ಶಾರದಾ ಚಿಟ್ ಫಂಡ್ ತನಿಖೆ ಸಿಬಿಐಗೆ: ಸುಪ್ರೀಂ

ಪಶ್ಚಿಮ ಬಂಗಾಳ ಸರ್ಕಾರಕ್ಕೆ ಹಿನ್ನಡೆ

​ಪ್ರಜಾವಾಣಿ ವಾರ್ತೆ
Published 9 ಮೇ 2014, 9:55 IST
Last Updated 9 ಮೇ 2014, 9:55 IST

ನವದೆಹಲಿ (ಐಎಎನ್ಎಸ್): ಶಾರದಾ ಚಿಟ್ ಫಂಡ್  ಹಗರಣದ ತನಿಖೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಿತು. ಇದರೊಂದಿಗೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ತೀವ್ರ ಹಿನ್ನಡೆಯಾಯಿತು.

ಒಡಿಶಾದ ಪೋನ್ಝಿ ಯೋಜನೆಯ ತನಿಖೆ ನಡೆಸುವಂತೆಯೂ ಸುಪ್ರೀಂಕೋರ್ಟ್ ಸಿಬಿಐಗೆ ಆಜ್ಞಾಪಿಸಿತು.

'ತನಿಖಾ ದಳವು ಶಾರದಾ ಅಲ್ಲದೆ ಪಶ್ಚಿಮ ಬಂಗಾಳದಲ್ಲಿ ಚಿಟ್ ಫಂಡ್ ಹಗರಣದಲ್ಲಿ ಷಾಮೀಲಾಗಿರುವ ಬೇರೆ ಯಾವುದೇ ಪೋನ್ಝಿ ಯೋಜನೆಯನ್ನು ತನಿಖಾ ಸಂಸ್ಥೆಯು ಪರಿಶೀಲಿಸುವುದು ಎಂದು ನ್ಯಾಯಮೂರ್ತಿ ಟಿ.ಎಸ್. ಥಾಕೂರ್ ನೇತೃತ್ವದ ಪೀಠವು ಹೇಳಿತು.

ಅಂತರ್ ರಾಜ್ಯ ಮಟ್ಟದಲ್ಲಿ ಪರಿಣಾಮ ಬೀರಿರುವ ಹಗರಣದ ತನಿಖೆಯಲ್ಲಿ ಪಶ್ಚಿಮ ಬಂಗಾಳ ಪೊಲೀಸರು ಯಾವುದೇ ಪ್ರಗತಿಯನ್ನೂ ತೋರಿಸಿಲ್ಲ ಎಂದು ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುತ್ತಾ ಪೀಠವು ಹೇಳಿತು.

ಚಿಟ್ ಪಂಡ್ ಹಗರಣದಲ್ಲಿ ಲೂಟಿಯಾಗಿರುವ ಹಣದ ವ್ಯಾಪ್ತಿ ಬಗ್ಗೆ ತನಿಖೆ ನಡೆಸುವಂತೆಯೂ ನ್ಯಾಯಾಲಯ ಸಿಬಿಐಗೆ ಸೂಚಿಸಿತು.

ಹಗರಣದ ಒಳಸಂಚು ಆಯಾಮ, ಹಣದ ಜಾಡು ಬಗ್ಗೆ ತನಿಖೆ ನಡೆಸುವಲ್ಲಿ ಅಥವಾ ಹಗರಣ ಸಂಬಂಧಿ ಆಸ್ತಿಪಾಸ್ತಿ ವಶಪಡಿಸಿಕೊಳ್ಳುವಲ್ಲಿ ಯಾವುದೇ ಪ್ರಗತಿ ಸಾಧಿಸಲೂ ರಾಜ್ಯ ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ಹೇಳಿತು.

ವಿಚಾರಣೆಯುದ್ದಕ್ಕೂ ಪಶ್ಚಿಮ ಬಂಗಾಳ ಸರ್ಕಾರ  ಪ್ರಕರಣವನ್ನು ಸಿಬಿಐಗೆ ಒಪ್ಪಿಸುವುದಕ್ಕೆ ವಿರೋಧ ವ್ಯಕ್ತ ಪಡಿಸುತ್ತಲೇ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.