ADVERTISEMENT

ಶಾಲಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ನಾಲ್ಕರ ಪೋರ

​ಪ್ರಜಾವಾಣಿ ವಾರ್ತೆ
Published 23 ಜುಲೈ 2016, 10:55 IST
Last Updated 23 ಜುಲೈ 2016, 10:55 IST
ಶಾಲಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ನಾಲ್ಕರ ಪೋರ
ಶಾಲಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾದ ನಾಲ್ಕರ ಪೋರ   

ನವದೆಹಲಿ: ನಾಲ್ಕು ವರ್ಷದ ಬಾಲಕನೊಬ್ಬ 12 ವರ್ಷದೊಳಗಿನವರ ಶಾಲಾ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.

ದೆಹಲಿಯ ಸಂಗಮ್ ವಿಹಾರದ ಹಮ್‌ದರ್ದ್ ಪಬ್ಲಿಕ್ ಶಾಲೆಯ ಶಯಾನ್ ಜಮಾಲ್ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿರುವ ಬಾಲಕ.  ಮೂರು ವರ್ಷದವನಿದ್ದಾಗ ಬ್ಯಾಟ್‌ ಹಿಡಿದ ಶಯಾನ್‌ಗೆ, ಸದ್ಯ ಅವರ ತಂದೆ ಅರ್ಷದ್ ಜಮಾಲ್ ತರಬೇತಿ ನೀಡುತ್ತಿದ್ದಾರೆ.

ಶಯಾನ್ ಬಾರಿಸುವ ಆಕರ್ಷಕ ಕವರ್ ಡ್ರೈವ್‌, ಲೇಟ್‌ ಕಟ್‌ಗಳು ಹುಬ್ಬೇರಿಸುವಂತೆ ಮಾಡಿವೆ. ವಿರಾಟ್ ಕೊಹ್ಲಿ ಎಂದರೆ ಇಷ್ಟ ಮತ್ತು ಭಾರತ ತಂಡಕ್ಕೆ ಆಡಬೇಕು ಎನ್ನುವುದು ನನ್ನ ಆಸೆ ಎಂದು ಶಯಾನ್ ಹೇಳಿದ್ದಾನೆ.

ಶಯಾನ್‌ಗೆ ಕ್ರಿಕೆಟ್ ಎಂದರೆ ಪ್ರಾಣ. ಎರಡು ದಿನ ಅವನನ್ನು ಕ್ರಿಕೆಟ್ ಆಡಲು ಕರೆದುಕೊಂಡು ಹೋಗದಿದ್ದರೆ ಪೀಡಿಸಲು ಆರಂಭಿಸುತ್ತಾನೆ. ಅವನಲ್ಲಿ ಪ್ರತಿಭೆ ಇದೆ. ಅವನನ್ನು ಉತ್ತಮ ಕ್ರಿಕೆಟ್‌ರ್‌ ಆಗಿ ರೂಪಿಸುವುದು ನನ್ನ ಗುರಿ ಎಂದು ಅರ್ಷದ್ ಹೇಳುತ್ತಾರೆ. ಅರ್ಷದ್ ಹಿಂದೆ ಕ್ಲಬ್ ಮಟ್ಟದಲ್ಲಿ ಕ್ರಿಕೆಟ್ ಆಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.