ADVERTISEMENT

ಶೀನಾ ಬೋರಾ ನನ್ನ ಮಗಳು: ಸಿದ್ಧಾರ್ಥ್‌ ದಾಸ್‌

‘ಡಿಎನ್‌ಎ’ ಪರೀಕ್ಷೆಗೂ ಸಿದ್ಧ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2015, 11:05 IST
Last Updated 1 ಸೆಪ್ಟೆಂಬರ್ 2015, 11:05 IST

ಮುಂಬೈ (ಪಿಟಿಐ): ಶೀನಾ ಬೋರಾ ಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಮಂಗಳವಾರ ಶೀನಾಳ ತಂದೆ ನಾನೇ ಎಂದು ಕೋಲ್ಕತ್ತಾ ಮೂಲದ ಸಿದ್ಧಾರ್ಥ್‌ ದಾಸ್‌ ಎಂಬ ವ್ಯಕ್ತಿ ಮುಂದೆ ಬಂದಿದ್ದಾರೆ.

‘ಶೀನಾಳ ತಾಯಿ ಇಂದ್ರಾಣಿ ಮುಖರ್ಜಿಯನ್ನು ನಾನು ಮದುವೆ ಆಗಿರಲಿಲ್ಲ. ಆದರೆ, ನಾವಿಬ್ಬರು 'ಲಿವಿಂಗ್ ಟುಗೆದರ್'ನಲ್ಲಿ ಜತೆಗಿದ್ದೆವು. ಶೀನಾ ಮತ್ತು ಆಕೆಯ ಸಹೋದರ ಮಿಖಾಯಿಲ್‌ ಬೋರಾ ಇಬ್ಬರೂ ನನ್ನ ಮಕ್ಕಳು. 1989ರಲ್ಲಿ ಇಂದ್ರಾಣಿ ನನ್ನನ್ನು ತೊರೆದು ಹೋದಳು. ಆ ನಂತರ, ಇದುವರೆಗೆ ನಾನು ಅವಳನ್ನು ಭೇಟಿಯಾಗಿಲ್ಲ. ಶೀನಾ ಕೊಲೆ ಆಗಿರುವ ವಿಚಾರ, ಪತ್ರಿಕೆಗಳ ಮುಖಾಂತರ ತಿಳಿಯಿತು’ ಎಂದು ಸಿದ್ಧಾರ್ಥ ಹೇಳಿದ್ದಾರೆ.

ಪೊಲೀಸ್‌ ತನಿಖೆಗೆ ಸಹಕರಿಸುವುದಾಗಿ ಹೇಳಿದ ಅವರು, ಒಂದು ವೇಳೆ, ಇಂದ್ರಾಣಿಯೇ ಶೀನಾಳನ್ನು ಕೊಲೆ ಮಾಡಿದ್ದರೆ, ಅವಳನ್ನು ಗಲ್ಲಿಗೇರಿಸಬೇಕು. ಶೀನಾಳ ತಂದೆ ನಾನೇ ಎನ್ನುವುದನ್ನು ಖಾತ್ರಿ ಪಡಿಸಿಕೊಳ್ಳಲು ‘ಡಿಎನ್‌ಎ’ ಪರೀಕ್ಷೆಗೂ ಸಿದ್ಧ ಎಂದು ಸಿದ್ಧಾರ್ಥ್‌ ಹೇಳಿದ್ದಾರೆ.

1986ರಲ್ಲಿ ಕಾಲೇಜು ದಿನಗಳಲ್ಲಿ ನಾನು ಇಂದ್ರಾಣಿಯನ್ನು ಭೇಟಿಯಾದೆ. 1989ರ ತನಕ ಜತೆಗಿದ್ದೆವು. ಆಗ ನನಗೆ ಯಾವುದೇ ಉದ್ಯೋಗ ಇರಲಿಲ್ಲ. ಹಾಗಾಗಿ ಇಂದ್ರಾಣಿ ನನ್ನನ್ನು ತೊರೆದು ಹೋದಳು ಎಂದು ದಾಸ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT