ನವದೆಹಲಿ (ಪಿಟಿಐ): ಸಬ್ಸಿಡಿ ಅಡುಗೆ ಅನಿಲ (ಎಲ್ಪಿಜಿ) ದರ ಪ್ರತಿ ಸಿಲಿಂಡರ್ಗೆ ಮೂರು ರೂಪಾಯಿ ಏರಿಕೆಯಾಗಿದೆ.
ಅನಿಲ ವಿತರಕರಿಗೆ ನೀಡಲಾಗುವ ಕಮಿಷನನ್ನು ಸರ್ಕಾರ ಹೆಚ್ಚಿಸಿರುವ ಫಲವಾಗಿ ದರ ಹೆಚ್ಚಳಗೊಂಡಿದೆ. ದರ ಏರಿಕೆ ಅ. 23ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬಂದಿದೆ.
ಸಬ್ಸಿಡಿ ದರದಲ್ಲಿ ವರ್ಷಕ್ಕೆ 12 ಸಿಲಿಂಡರ್ ಮಾತ್ರ ದೊರೆಯುತ್ತದೆ. ಕಮಿಷನ್ ಏರಿಕೆಯಿಂದಾಗಿ ಅದರ ನಂತರ ಗ್ರಾಹಕರು ಖರೀದಿಸುವ 14.2 ಕಿಲೋ ಸಿಲಿಂಡರ್ ಬೆಲೆ ₨ 880 ರಿಂದ ₨883.50ಕ್ಕೆ ಏರಿದೆ.
ಕಳೆದ ಡಿಸೆಂಬರ್ನಲ್ಲಿ ವಿತರಕರ ಕಮಿಷನ್ ಪ್ರತಿ ಸಿಲಿಂಡರ್ಗೆ ₨ 3.46 ಏರಿಕೆ ಮಾಡಲಾಗಿತ್ತು. ಕಮಿಷನ್ ಏರಿಕೆಯಿಂದಾಗಿ ದೇಶದಾದ್ಯಂತ ಇರುವ 13,896 ಸಿಲಿಂಡರ್ ವಿತರಕರಿಗೆ ಪ್ರಯೋಜನವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.