ADVERTISEMENT

ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣ: 18 ವರ್ಷಗಳ ಬಳಿಕ ಸಿಕ್ಕ ನ್ಯಾಯ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2014, 10:33 IST
Last Updated 4 ಏಪ್ರಿಲ್ 2014, 10:33 IST

ತಿರುವನಂತಪುರ (ಪಿಟಿಐ): ಕೇರಳದ ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಧರ್ಮರಾಜನ್‌ಗೆ ಕೆಳ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಕೇರಳ ಹೈಕೋರ್ಟ್‌ ಶುಕ್ರವಾರ ಎತ್ತಿ ಹಿಡಿದಿದ್ದು 18 ವರ್ಷಗಳ ಬಳಿಕ ನ್ಯಾಯ ಸಿಕ್ಕಂತಾಗಿದೆ.

ಕೇರಳ ಹೈಕೋಟ್‌ನ ವಿಶೇಷ ಪೀಠದ ನ್ಯಾಯಾಧೀಶರಾದ ಕೆ.ಟಿ ಶಂಕರನ್‌ ಮತ್ತು ಎಂ.ಎಲ್‌. ಜೋಸೆಪ್‌ ಫ್ರಾನ್ಸಿಸ್‌ ಅವರು ಆರೋಪಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಶೀಲಿಸಿ ಈ ತೀರ್ಪು ಪ್ರಕಟಿಸಿದರು.

ಕಳೆದ 18 ವರ್ಷಗಳ ಹಿಂದೆ ಸೂರ್ಯನೆಲ್ಲಿಯ ಅಪ್ರಾಪ್ತ ಬಾಲಕಿಯ ಮೇಲೆ 40 ಜನರು ಅತ್ಯಾಚಾರ ಎಸಗಿದ್ದರು. ಇವರಲ್ಲಿ 36 ಜನರು ತಪ್ಪಿತಸ್ಥರು ಎಂದು ನ್ಯಾಯಾಲಯ ಹೇಳಿತ್ತು. ಐವರು ವಿಚಾರಣೆ ಸಂದರ್ಭದಲ್ಲಿ ಮೃತಪಟ್ಟಿದ್ದರು. ಸೂಕ್ತ ಸಾಕ್ಷಿಗಳಿಲ್ಲದೆ ಏಳು ಜನರನ್ನು ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು.

ಉಳಿದ 24 ಆರೋಪಿಗಳಲ್ಲಿ ಧರ್ಮರಾಜನ್, ರಾಜು, ಉಷಾ ಅವರಿಗೆ ಜೀವಾವಧಿ ಶಿಕ್ಷೆ ನೀಡಿದರೆ ಉಳಿದ ಆರೋಪಿಗಳಿಗೆ ದಂಡ ವಿಧಿಸಲಾಗಿದೆ.

ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ಥೆಗೆ ಈಗ 36 ವರ್ಷಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT