ADVERTISEMENT

ಸೇನಾ ಭರ್ತಿ: ಘರ್ಷಣೆಯಲ್ಲಿ ಐವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2015, 11:12 IST
Last Updated 27 ಏಪ್ರಿಲ್ 2015, 11:12 IST

ಕಾಶ್ಮೀರ(ಪಿಟಿಐ): ಜಮ್ಮು ಕಾಶ್ಮೀರದ ರೆಸೈ ಜಿಲ್ಲೆಯಲ್ಲಿ ಸೋಮವಾರ ನಡೆದ ಸೇನಾ ಭರ್ತಿಯಲ್ಲಿ ಘರ್ಷಣೆ ನಡೆದು  ಒಬ್ಬ ಪೊಲೀಸ್‌ ಸೇರಿದಂತೆ ಐವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಸೇನಾ ಭರ್ತಿಯಲ್ಲಿ ಭಾಗವಹಿಸಲು ನೂರಾರು ಅಭ್ಯರ್ಥಿಗಳು ಸರತಿ ಸಾಲಿನಲ್ಲಿ ನಿಂತಿದ್ದರು.  ಈ ಸಂದರ್ಭದಲ್ಲಿ  ನೂಕು ನುಗ್ಗಲು ಪ್ರಾರಂಭವಾಯಿತು. ಪರಿಸ್ಥಿತಿ ಕೈಮೀರದಂತೆ  ಪೊಲೀಸರು ಲಘು ಲಾಟಿ ಪ್ರಹಾರ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.