ADVERTISEMENT

‘ನೆಟ್‌ವರ್ಕ್‌ 18’ಗೆ ರಾಜ್‌ದೀಪ್‌ ರಾಜೀನಾಮೆ?

​ಪ್ರಜಾವಾಣಿ ವಾರ್ತೆ
Published 29 ಮೇ 2014, 19:30 IST
Last Updated 29 ಮೇ 2014, 19:30 IST

ನವದೆಹಲಿ: ಖಾಸಗಿ ಟೆಲಿವಿಷನ್‌ ಸುದ್ದಿ ವಾಹಿನಿ ಸಿಎನ್‌ಎನ್‌ ಐಬಿಎನ್‌ನ ಪ್ರವರ್ತಕ ಸಂಸ್ಥೆಯಾದ ನೆಟ್‌ವರ್ಕ್‌18 ಸುದ್ದಿ ಸಮೂಹ ಸಂಸ್ಥೆಯನ್ನು  ರಿಲಯನ್ಸ್‌ ಇಂಡ­ಸ್ಟ್ರೀಸ್‌ ಲಿಮಿಟೆಡ್‌ ಖರೀದಿಸಲಿದೆ.

ರೂ. 4,000 ಕೋಟಿಗಳಿಗೆ ಈ ಖರೀದಿ ನಡೆಯಲಿರುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಸಿಎನ್‌ಎನ್‌ ಐಬಿಎನ್‌ ಟಿ.ವಿಯ ಪತ್ರಕರ್ತರಾದ ರಾಜದೀಪ್‌ ಸರ್‌ದೇಸಾಯಿ ಮತ್ತು ಸಾಗರಿಕಾ ಘೋಷ್‌ ಅವರು ತಮ್ಮ ಹುದ್ದೆಗೆ ಜೂನ್‌ ಅಂತ್ಯಕ್ಕೆ ರಾಜೀ­ನಾಮೆ ನೀಡುವ ಸಾಧ್ಯತೆ ಇದೆ. ಇವರಿಬ್ಬರೂ ಜೂನ್‌ 1 ರಿಂದಲೇ ರಜೆಯ ಮೇಲೆ ತೆರಳಲಿದ್ದಾರೆ ಎಂದು ಹೇಳಲಾಗಿದೆ.

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬಗ್ಗೆ ಹೆಚ್ಚು ಟೀಕೆ ಮಾಡುವುದು ಬೇಡ ಎಂದು ಆಡಳಿತ ಮಂಡಳಿಯು ಸಾಗರಿಕಾ ಘೋಷ್‌ ಅವರಿಗೆ  ಸೂಚನೆ ನೀಡಿತ್ತು ಎಂದು ಹೇಳಲಾಗಿದೆ. 

ನೆಟ್‌ವರ್ಕ್‌ 18ರ ವ್ಯವಸ್ಥಾಪಕ ನಿರ್ದೇಶಕ ರಾಘವ್‌ ಬಹ್ಲ್‌ ಅವರೂ ಮೇ 30ರಂದು ರಾಜೀನಾಮೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.