ADVERTISEMENT

‘ವಲಸಿಗರು ಅಮೆರಿಕತ್ವ ರೂಢಿಸಿಕೊಳ್ಳಬೇಕು’

​ಪ್ರಜಾವಾಣಿ ವಾರ್ತೆ
Published 30 ಜೂನ್ 2015, 6:39 IST
Last Updated 30 ಜೂನ್ 2015, 6:39 IST
‘ವಲಸಿಗರು ಅಮೆರಿಕತ್ವ ರೂಢಿಸಿಕೊಳ್ಳಬೇಕು’
‘ವಲಸಿಗರು ಅಮೆರಿಕತ್ವ ರೂಢಿಸಿಕೊಳ್ಳಬೇಕು’   

ವಾಷಿಂಗ್ಟನ್ (ಪಿಟಿಐ): ಅಮೆರಿಕದಲ್ಲಿರುವ ವಲಸಿಗರು ಇಂಗ್ಲಿಷ್‌ ಭಾಷೆ ಹಾಗೂ ಅಮೆರಿಕದ ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಸ್ವಯಂ ಭಾರತ ಮೂಲದ ಅಮೆರಿಕನ್ ಆಗಿರುವ ಬಾಬಿ ಜಿಂದಾಲ್ ಅಭಿಪ್ರಾಯ ಪಟ್ಟಿದ್ದಾರೆ.

2016ರಲ್ಲಿ ನಡೆಯುಲಿರುವ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ರಿಪಬ್ಲಿಕನ್‌ ಪಕ್ಷದಿಂದ ಉಮೇದುವಾರಿಗೆ ಪ್ರಕಟಿಸಿರುವ ಬಾಬಿ ಜಿಂದಾಲ್, ಎರಡನೇ ಅವಧಿಗೆ ಲೂಸಿಯಾನ್ ಗವರ್ನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

‘ಮಿಶ್ರ ಜನಾಂಗದ ಅಮೆರಿಕನ್‌ರಿಂದ ರೋಸಿ ಹೋಗಿರುವೆ’ ಎಂದು ಜಿಂದಾಲ್‌ ಅವರು ಹೇಳಿಕೊಂಡಿದ್ದಾರೆ. ಇದು ಅವರ ರಾಜಕೀಯ ಕ್ರಿಯಾ ಸಮಿತಿಯು ಬಿಡುಗಡೆಗೊಳಿಸಿದ ವೀಡಿಯೊ ಜಾಹೀರಾತಿನಲ್ಲಿದೆ. 30 ಸೆಕೆಂಡ್‌ಗಳ ವೀಡಿಯೊ ಇದಾಗಿದ್ದು, ಅಧ್ಯಕ್ಷೀಯ ಚುನಾವಣೆಗೆ ಉಮೇದುವಾರಿಕೆ ಪ್ರಕಟಿಸಿದ ಬಳಿಕ ಬಿಡುಗಡೆಯಾದ ಮೊದಲ ಪ್ರಚಾರಾರ್ಥ ಜಾಹೀರಾತು.

‘ನಮ್ಮ ವಲಸೆ ವ್ಯವಸ್ಥೆ ಹಾಳಾಗಿದೆ ಎಂದೆನಿಸುತ್ತದೆ. ಅಮೆರಿಕಕ್ಕೆ ವಲಸೆ ಬರುವ ಜನರು ಕಾನೂನು ಬದ್ಧವಾಗಿಯೇ ಬರಬೇಕು. ಅವರು ನಮ್ಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಅವರು ಇಂಗ್ಲಿಷ್ ಕಲಿಯಬೇಕು. ತೋಳೇರಿಸಿ ಕೆಲಸ ಮಾಡಬೇಕು’ ಎಂದು ವೀಡಿಯೊದಲ್ಲಿ ಅವರು ನುಡಿದಿದ್ದಾರೆ.

1970ರ ದಶಕದಲ್ಲಿ ಜಿಂದಾದ್ ಅವರ ಪೋಷಕರು ಅಮೆರಿಕಕ್ಕೆ ವಲಸೆ ಹೋಗಿದ್ದರು. ಬಾಬಿ ಅವರು 1971ರಲ್ಲಿ ಬ್ಯಾಟನ್ ರೋಗ್‌ನಲ್ಲಿ ಜನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT