ADVERTISEMENT

ಎಎಪಿಗೆ ರಾಜೀನಾಮೆ ನೀಡಿದ ಆಶೀಷ್‌

ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ಗೆ ಸಲ್ಲಿಕೆ

ಪಿಟಿಐ
Published 22 ಆಗಸ್ಟ್ 2018, 20:03 IST
Last Updated 22 ಆಗಸ್ಟ್ 2018, 20:03 IST
ಆಶೀಷ್‌ ಖೇತನ್‌
ಆಶೀಷ್‌ ಖೇತನ್‌   

ನವದೆಹಲಿ: ಆಮ್‌ ಆದ್ಮಿ ಪಕ್ಷದ ಮುಖಂಡ ಆಶೀಷ್‌ ಖೇತನ್‌ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಆಗಸ್ಟ್‌ 15ರಂದೇ ಖೇತನ್‌ ಅವರು ತಮ್ಮ ರಾಜೀನಾಮೆಯನ್ನು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರಿಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಶುತೋಷ್‌ ಸಹ ಅದೇ ದಿನ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಇಬ್ಬರ ರಾಜೀನಾಮೆಯನ್ನು ಕೇಜ್ರಿವಾಲ್‌ ಇನ್ನೂ ಅಂಗೀಕರಿಸಿಲ್ಲ. ಇಬ್ಬರು ಪ್ರಮುಖರ ರಾಜೀನಾಮೆಯಿಂದ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಲಾಗಿದೆ.

ADVERTISEMENT

’ಸದ್ಯಕ್ಕೆ ಸಕ್ರಿಯ ರಾಜಕೀಯದಲ್ಲಿ ಇಲ್ಲ. ವದಂತಿಗಳ ಬಗ್ಗೆ ನನಗೆ ಆಸಕ್ತಿ ಇಲ್ಲ. ವಕೀಲ ವೃತ್ತಿ ಮುಂದುವರಿಸುವ ನಿಟ್ಟಿನಲ್ಲಿ ದೆಹಲಿ ಅಭಿವೃದ್ಧಿ ಆಯೋಗದ (ಡಿಡಿಸಿ) ಉಪಾಧ್ಯಕ್ಷ ಹುದ್ದೆಗೆ ಏಪ್ರಿಲ್‌ನಲ್ಲಿ ರಾಜೀನಾಮೆ ನೀಡಿದ್ದೆ. ಈಗ ವಕೀಲ ವೃತ್ತಿಯ ಬಗ್ಗೆ ಹೆಚ್ಚು ಗಮನ ನೀಡಿದ್ದೇನೆ’ ಎಂದು ಖೇತನ್‌ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.